ಸಾಂಸ್ಕೃತಿಕ

ನಟಿ ಹನಿ ರೋಸ್‌ಗೆ ಅಶ್ಲೀಲ ಮೆಸೇಜ್; ಖ್ಯಾತ ಉದ್ಯಮಿ ಸೇರಿ 30 ಜನರ ವಿರುದ್ಧ ಕೇರಳ ಸಿಎಂಗೆ ದೂರು

Views: 162

ಕನ್ನಡ ಕರಾವಳಿ ಸುದ್ದಿ:ತಮ್ಮ ಸೌಂದರ್ಯದಿಂದಲೇ ರೀಲ್ಸ್ ಗಳಲ್ಲಿ ರಾರಾಜಿಸುವ ಮಲಯಾಳಂ ನಟಿ ಹನಿ ರೋಸ್  ನಟಿಗೆ ಕೆಲ ಕಾಮುಕರು ಅಶ್ಲೀಲ ಮೆಸೇಜ್ ಹಾಗೂ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡಿ ಕಿರುಕುಳ ನೀಡ್ತಿದ್ದಾರೆ.ಇದರಿಂದ ಬೇಸತ್ತು ಹೋಗಿರುವ ನಟಿ  ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಟಿ ಹನಿರೋಸ್ ಲೈಂಗಿಕ ಕಿರುಕುಳ ಕೇಸ್ ಇಡೀ ಕೇರಳದಲ್ಲಿ ಸಂಚಲನ ಸೃಷ್ಟಿಸಿದೆ. ನಟಿ ಹನಿರೋಸ್, ಖ್ಯಾತ ಉದ್ಯಮಿ ಸೇರಿ 30 ಜನರ ವಿರುದ್ಧ ಕೇರಳ ಸಿಎಂಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದ್ದ ಸಿಎಂ ಎಸ್ಐಟಿ ತಂಡ ರಚನೆ ಮಾಡಿದ್ದಾರೆ.

ನಟಿ ಹನಿ ರೋಸ್‌ಗೆ ಅಶ್ಲೀಲ ಮೆಸೇಜ್ ಹಿನ್ನಲೆ, ಕೇರಳದ ಎಸ್ಐಟಿ ತಂಡ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರನ್ನ ಬಂಧಿಸಿದ್ದಾರೆ. ಕೇರಳದ ಪ್ರಮುಖ ಆಭರಣ ವ್ಯಾಪಾರಿಯಾಗಿರೋ ಚೆಮ್ಮನೂರ್ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಿದ್ದು, ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ಹನಿರೋಸ್ ಪ್ರಕರಣ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಬಾಬಿ, ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ನಮ್ಮ ಮಳಿಗೆಗಳ ಉದ್ಘಾಟನೆಗಳಿಗೆ ಹನಿ ರೋಸ್ ಬರುತ್ತಿದ್ದರು, ಆಗ ನಾವು ಡ್ಯಾನ್ಸ್ ಮಾಡ್ತಿದ್ವಿ, ಎಂದು ಪೊಲೀಸರಿಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

 

Related Articles

Back to top button