ಇತರೆ

ಧರ್ಮಸ್ಥಳದಲ್ಲಿ ದರ್ಶನ ಪಡೆದು ವಾಪಸ್ ತೆರಳುವಾಗ ಅಪಘಾತ ; ಏಳು ಮಹಿಳೆಯರ ದುರ್ಮರಣ 

Views: 0

ಧರ್ಮಸ್ಥಳದಲ್ಲಿ ದರ್ಶನ ಪಡೆದು ವಾಪಸ್ ತೆರಳುವಾಗ ಅಪಘಾತ ಸಂಭವಿಸಿ ತಮಿಳುನಾಡಿನ ಏಳು ಮಹಿಳೆಯರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ನಟ್ರಂಪಳ್ಳಿ ಸಮೀಪದ ಚಂಡಿಯೂರಿಯ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅರ್ಧ ಗಂಟೆ ಪ್ರಯಾಣಿಸಿದ್ರೆ ಊರು ಸೇರುತ್ತಿದ್ದ ಯಾತ್ರಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಯಾತ್ರಿಕರ ವ್ಯಾನ್ ಪಂಕ್ಚರ್ ಆಗಿದ್ದರಿಂದ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ. ಈ ವೇಳೆ ಮಹಿಳೆಯರು ವಾಹನದಿಂದ ಇಳಿದು ಕೆಳಗೆ ನಿಂತಿದ್ದರು. ಆಗ ವೇಗವಾಗಿ ಬಂದ ಮಿನಿ ಲಾರಿ ವ್ಯಾನ್​ಗೆ ಡಿಕ್ಕಿ ಹೊಡೆದು, ಮಹಿಳೆಯರ ಮೇಲೆ ಪಲ್ಟಿಯಾದ ಪರಿಣಾಮ ದುರಂತ ಸಂಭವಿಸಿದೆ.

Related Articles

Back to top button
error: Content is protected !!