ದೀಪಾವಳಿಯಲ್ಲಿ ನೀರು ತುಂಬಿಸುವುದು, ಎಣ್ಣಿ ಹಚ್ಚಿ ಸ್ನಾನ, ಗೋ ಪೂಜೆ, ಅಂಗಡಿಪೂಜೆ, ತುಳಸಿ ಪೂಜೆಯ ಶುಭ ಮುಹೂರ್ತ ಯಾವುದು..?

Views: 195
ಕನ್ನಡ ಕರಾವಳಿ ಸುದ್ದಿ: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮ–ಸಡಗರದಿಂದ ಆಚರಿಸುತ್ತಾರೆ. 2025ರಲ್ಲಿ ನೀರು ತುಂಬಿಸುವುದು, ಎಣ್ಣಿ ಹಚ್ಚಿ ಸ್ನಾನ, ಗೋ ಪೂಜೆ, ಅಂಗಡಿಪೂಜೆ, ತುಳಸಿ ಪೂಜೆಯ ಶುಭ ಮುಹೂರ್ತ ಇನ್ನಿತರ ವಿವರ ಇಲ್ಲಿದೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ ಎಂದೂ ಕರೆಯುಲಾಗುತ್ತದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಹಿಂದೂಗಳು ಈ ಹಬ್ಬವನ್ನು ಸಂಭ್ರಮದೊಂದಿಗೆ ಭಕ್ತಿ–ಭಾವದಿಂದ ದೀಪ ಬೆಳಗುವ ಮೂಲಕ ಆಚರಿಸುತ್ತಾರೆ.
ದೀಪಾವಳಿಯ ದೀಪವನ್ನು ಸಂತೋಷ ಹಾಗೂ ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಈ ಹಬ್ಬದಲ್ಲಿ ಲಕ್ಷ್ಮೀದೇವಿ ಹಾಗೂ ಬಲೀಂದ್ರ ದೇವನನ್ನು ಪೂಜಿಸುವುದು ವಾಡಿಕೆ. ದೀಪಾವಳಿಯನ್ನು ಕಾರ್ತಿಕ ಮಾಸದ ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.
ದೀಪ ಹಬ್ಬದಂದು ಮನೆ, ಮನೆಗಳಲ್ಲಿ, ಬೀದಿಗಳಲ್ಲಿ ದೀಪ ಬೆಳಗುವ ಮೂಲಕ ನಾಡಿಗೆ ಸಮೃದ್ಧಿ, ಸಂತೋಷ ಬರಲಿ ಹಾರೈಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ, ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಂಡು, ಉಡುಗೊರೆ ನೀಡಿ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡುವುದು ವಿಶೇಷ.
2025ರಲ್ಲಿ ದೀಪಾವಳಿ ಯಾವಾಗ? ಶುಭ ಮುಹೂರ್ತ ಯಾವುದು?
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಆಚರಣೆಯ ಶುಭ ಮುಹೂರ್ತದಂತೆ
• 19-10-25 ಸಂಜೆ ರವಿವಾರ ನೀರು ತುಂಬಿಸುವುದು
• 20-10-25 ,ಸೋಮವಾರ ನರಕ ಚತುರ್ದಶಿ. ಚಂದ್ರೋದಯ ಕಾಲದಲ್ಲಿ ಬೆಳಿಗ್ಗೆ 5-13ಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವುದು.
ಸಂಜೆ ದೀಪಾವಳಿ, ಬಲೀಂದ್ರ ಪೂಜೆ, ಧನಲಕ್ಷ್ಮಿ ಪೂಜೆ, ಗದ್ದೆಗಳಿಗೆ ದೀಪ ಇಡುವುದು.
21-10-25 ಮಂಗಳವಾರ ಅಮಾವಾಸ್ಯೆ ಸಂಜೆ ಸುಮಾರು 6-00 ಗಂಟೆ ವರೆಗೆ .
22-10-25 ಬಲಿಪಾಡ್ಯ ಗೋ ಪೂಜೆ, ಅಂಗಡಿಪೂಜೆ, ತುಳಸಿ ಪೂಜೆ
ವಿ.ಸೂ.21-10-25 ಮಂಗಳವಾರ ಅಮವಾಸ್ಯೆ ಸುಮಾರು 6- 00 ಗಂಟೆವರೆಗೆ ಮಾತ್ರ ಇರುವುದರಿಂದ 20-10-25 ಸೋಮವಾರ ದೀಪಾವಳಿ ಆಚರಣೆ.