ದಸರಾ ಆನೆ ‘ಅರ್ಜುನ’ ಸಾವಿನ ನೋವಿನ ನಡುವೆ ಮತ್ತೊಂದು ಆನೆ ಸಾವು,ಎಲ್ಲೆಲ್ಲೂ ಆಕ್ರೋಶ
Views: 103
ಮನುಷ್ಯರ ದುರಾಸೆಗೆ ಮಿತಿ ಇಲ್ಲ, ಹೀಗಾಗಿಯೇ ಇಡೀ ಜಗತ್ತಲ್ಲಿ ಅತಿ ಕ್ರೂರ & ಅಪಾಯಕಾರಿ ಪ್ರಾಣಿ ಎಂದರೆ ಮನುಷ್ಯ ಎನ್ನಲಾಗುತ್ತದೆ. ಹೀಗಿದ್ದಾಗ ಮನುಷ್ಯ ಆನೆಯನ್ನು ಪಳಗಿಸುವ ವಿದ್ಯೆನ ಕಲಿತ ಅನ್ನೋ ಉತ್ಸಾಹ ಮನುಷ್ಯರಿಗೆ ಇದ್ದರೆ, ಇನ್ನೊಂದು ಕಡೆ ಪ್ರಕೃತಿ ಮೇಲೆ ಮನಷ್ಯರಿಂದ ಘೋರ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪ ಸತ್ಯ. ಹೀಗೆ ಇಷ್ಟೆಲ್ಲಾ ಗೊಂದಲಗಳ ನಡುವೆ, ದಸರಾ ಆನೆ ‘ಅರ್ಜುನ’ ಸಾವಿನ ನೋವಿನ ನಡುವೆ ಮತ್ತೊಂದು ಆನೆ ಮೃತಪಟ್ಟಿದೆ.
ಅಂದಹಾಗೆ ಹಾಸನದ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿದೆ. ಈ ಘಟನೆ ಜನರನ್ನು ತೀವ್ರ ನೋವಿಗೆ ತಳ್ಳಿದೆ. ಅರ್ಜುನ ಆನೆಯ ಸಾವು ಕನ್ನಡಿಗರನ್ನ ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ.
ಅದರಲ್ಲೂ 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಬಗ್ಗೆ ಕನ್ನಡಿಗರು ಪ್ರೀತಿಯ ಹೊಂದಿದ್ದರು. ಕಾಡಾನೆ ಜೊತೆ ಸೆಣೆಸಾಟ ನಡೆಸಿ ಕನ್ನಡ ನಾಡಿನ ಜನರ ರಕ್ಷಣೆ ಮಾಡುವಾಗ ಅರ್ಜುನ ಮೃತಪಟ್ಟಿದ್ದ. ಈಗ ನೋಡಿದರೆ ಮನುಷ್ಯರು ನೀಡಿದ ಕರೆಂಟ್ ಶಾಕ್ಗೆ ಮತ್ತೊಂದು ಆನೆ ಮೃತಪಟ್ಟಿದೆ.
ವಿದ್ಯುತ್ ಶಾಕ್ ಕೊಟ್ಟು ಆನೆ ಹತ್ಯೆ?
ಹೌದು, ಬೆಳೆ ನಾಶ ಮಾಡುತ್ತಿದ್ದ ಆನೆಗೆ ಕರೆಂಟ್ ಶಾಕ್ ನೀಡಿದ ಪರಿಣಾಮ ಗಜರಾಜ ಅಲ್ಲೇ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಆದೂ, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿಯ ಹೊರವಲಯ ಇಂತಹ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ವಿದ್ಯುತ್ ಹರಿದಿದ್ದ ಹಿನ್ನೆಲೆ, ಗಂಡಾನೆ ಸ್ಥಳದಲ್ಲೇ ಮೃತಪಟ್ಟಿದೆ. ಇದಿಷ್ಟೇ ಅಲ್ಲದೆ ಆನೆ ಸತ್ತ ಬಳಿಕ ಜಮೀನು ಮಾಲೀಕ ಮಾಡಿದ ಕಿರಾತಕ ಕೆಲಸದ ಬಗ್ಗೆ ಎಲ್ಲೆಲ್ಲೂ ಆಕ್ರೋಶ ವ್ಯಕ್ತವಾಗಿದೆ.
ಹೀಗೆ ತನ್ನ ಜಮೀನಿಗೆ ನುಗ್ಗಿ ಆನೆ ತನ್ನ ಬೆಳೆ ತಿನ್ನುತ್ತಿದೆ ಅಂತ ಕೋಪಗೊಂಡ ಜಮೀನಿನ ಮಾಲೀಕ ಕಾಡಾನೆಗೆ ಕರೆಂಟ್ ಶಾಕ್ ಕೊಡಿಸಿದ್ದ. ಅದರ ಜೀವವನ್ನು ತೆಗೆದಿದ್ದಾನೆ, ಇಷ್ಟು ಮಾತ್ರವಲ್ಲದೆ ಯಾರಿಗೂ ತಿಳಿಯದಂತೆ, ಆನೆಯ ಹೂತು ಹಾಕಿದ್ದಾನೆ. ಕೋಡಿಹಳ್ಳಿ ನಿವಾಸಿ ವಿರುದ್ಧ ಈ ಆರೋಪ ಕೇಳಿಬಂದಿದೆ. ಗದ್ದೆ ಸುತ್ತಲೂ ತಂತಿ ಅಳವಡಿಸಿ ವಿದ್ಯುತ್ ಕನೆಕ್ಷನ್ನ ನೀಡಿದ್ದ ಪರಿಣಾಮ 16 ವರ್ಷದ ಗಂಡಾನೆ ಜೀವ ಕಳೆದುಕೊಂಡಿದೆ ಅಂತಾ ಹೇಳಲಾಗಿದೆ. ಜಮೀನು ದಾಟಲು ಆನೆ ಯತ್ನಿಸಿದ್ದಾಗ ವಿದ್ಯುತ್ ಹರಿದು ಆನೆ ಮೃತಪಟ್ಟಿದೆ ಎನ್ನಲಾಗಿದೆ.
16 ವರ್ಷದ ಗಂಡಾನೆ ವಿದ್ಯುತ್ ಹರಿದು ಮೃತಪಟ್ಟ ಬಳಿಕ ಅದೇ ಹೊಲದಲ್ಲಿ ಸಮಾಧಿ ಕೂಡ ಮಾಡಿದ್ದಾನೆ ಎಂದು, ಕೋಡಿಹಳ್ಳಿಯ ನಿವಾಸಿ ವಿರುದ್ಧ ಆರೋಪ ಕೇಳಿಬಂದಿದೆ. ಆನೆಯ ಹೂತು ಹಾಕಿದ 3 ದಿನಗಳ ಬಳಿಕ ಅರಣ್ಯಾಧಿಕಾರಿಗಳಿಗೆ, ಈ ಬಗ್ಗೆ ಮಾಹಿತಿ ಸಿಕ್ಕಿದೆ.
ಭೂಮಿ ಅಗೆದು ಆನೆ ಕಳೆಬರ ಹೊರತೆಗೆದಿರುವ ಅರಣ್ಯಾಧಿಕಾರಿಗಳು, ಆನೆಯ ದಂತವನ್ನು ಬೇರ್ಪಡಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹೀಗಾಗಿ ದಂತಕ್ಕಾಗಿ ಆನೆನ ಸಾಯಿಸಿಲ್ಲ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಆರೋಪಿ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆದರೆ ಘಟನೆ ಬಳಿಕ ಆರೋಪಿ ನಾಪತ್ತೆಯಾಗಿದ್ದು, ಸರ್ಚಿಂಗ್ ನಡೀತಿದೆ.
ಒಟ್ನಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅದೆಷ್ಟು ಕ್ರೂರಿ ಆಗಬಲ್ಲ, ಕಾಡು ಪ್ರಾಣಿಗಳನ್ನ & ಪ್ರಕೃತಿಯ ಮೇಲೆ ಹೇಗೆಲ್ಲಾ ದೌರ್ಜನ್ಯ ತೋರಿಸಬಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ. ಅದರಲ್ಲೂ ಮೂಕ ಪ್ರಾಣಿಯ ಮೇಲೆ ನಡೆದಿರುವ ಈ ದೌರ್ಜನ್ಯದ ಬಗ್ಗೆ ಇದೀಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗೇ ಮನುಷ್ಯನೆ ನೀನೆಷ್ಟು ಕ್ರೂರಿ? ಅಂತಾ ನಾಗರಿಕ ಸಮಾಜ ಪ್ರಶ್ನೆ ಮಾಡುತ್ತಿದೆ.