ಸಾಂಸ್ಕೃತಿಕ
ದರ್ಶನ್‌ಗೆ ಜಾಮೀನು ಬೆನ್ನಲ್ಲೇ 7 ಮಂದಿ ಆರೋಪಿಗಳಿಗೆ ಸೆರೆವಾಸದಿಂದ ಮುಕ್ತಿ
Views: 48
ಕನ್ನಡ ಕರಾವಳಿ ಸುದ್ದಿ:ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪ ಹೊತ್ತಿರುವ ದರ್ಶನ್ ಗ್ಯಾಂಗ್ ಜೈಲಿನಿಂದ ರಿಲೀಸ್ ಆಗಿದೆ. 7 ಮಂದಿ ಆರೋಪಿಗಳಿಗೆ ಸೆರೆವಾಸದಿಂದ ಮುಕ್ತಿ ಸಿಕ್ಕಿದೆ. ಇದರ ಮಧ್ಯೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರೋ ದರ್ಶನ್ ನಿವಾಸದಲ್ಲಿ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ. ಇದೀಗ ದರ್ಶನ್ ಮೈಸೂರಿಗೆ ತೆರಳಲು ಅನುಮತಿ ಸಿಕ್ಕಿದೆ. ಜೊತೆ ಚಿತ್ರದುರ್ಗದ ಇಬ್ಬರು ಆರೋಪಿಗಳಿಗೂ ತಮ್ಮ ತವರಿಗೆ ತೆರಳಲು ಅನುಮತಿ ದೊರಕಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೀಗ ದರ್ಶನ್ ಪಡೆಗೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ದರ್ಶನ್‌ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಚಿತ್ರದುರ್ಗದ ಆರೋಪಿಗಳು ತಮ್ಮ ಊರಿಗೆ ಪಯಣಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ. ಆದರೂ ಅಲ್ಲಿವರೆಗಂತೂ ದರ್ಶನ್ ಪಡೆ ಸೇಫ್ ಆಗಿದೆ.