ತೆಂಗಿನಕಾಯಿಗೆ ದಾಖಲೆ ದರ: ಕೆ.ಜಿ.ಗೆ 50 ರೂ.ಒಂದೇ ತಿಂಗಳಲ್ಲಿ 25 ರೂ. ಏರಿಕೆ, ಬೆಳೆಗಾರರಲ್ಲಿ ಮಂದಹಾಸ!
Views: 462
ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಎಳನೀರನ್ನೇ ಮಾರಾಟ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದಾಸ್ತಾನು ಕಡಿಮೆಯಾಯಿತು. ಇದರಿಂದ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಇದಲ್ಲದೇ ಕೊಬ್ಬರಿ ಎಣ್ಣೆ, ತೆಂಗಿನ ಪುಡಿ ದರವೂ ಏರಿಕೆಯಾಗಿದೆ. ಹೀಗಾಗಿ ತೆಂಗಿನಕಾಯಿ ದರ ತಿಂಗಳ ಅಂತರದಲ್ಲಿ ದುಪ್ಪಟ್ಟು ಆಗಿದೆ.
ಎಳನೀರಿಗೆ ಮಾತ್ರ ಇದ್ದ ಬೇಡಿಕೆ ಈ ಬಾರಿ ತೆಂಗಿನಕಾಯಿಗೂ ಇದ್ದು, ದಾಖಲೆ ಮಟ್ಟದ ದರದಲ್ಲಿ ಮಾರಾಟ ಆಗುತ್ತಿದೆ. ಬೆಳೆಗಾರರ ಸಂಘದಿಂದ 51 ರುಪಾಯಿಗೆ ತೆಂಗು ಖರೀದಿಯಾಗುತ್ತಿದೆ. ಕಳೆದ ತಿಂಗಳಷ್ಟೇ ಬೆಳೆಗಾರರಿಂದ ಕೇವಲ 25 ರುಪಾಯಿಗೆ ಖರೀದಿಸಿ ಬೆಲೆ ಕುಸಿತ ಆಗಿತ್ತು. ಒಂದೇ ತಿಂಗಳಲ್ಲಿ ಭಾರೀ ಬಾಡಿಕೆ ಹೆಚ್ಚಾಗಿದೆ. ತೆಂಗಿನಕಾಯಿ ದಾಸ್ತಾನು ಕಡಿಮೆ ಆದ ಹಿನ್ನಲೆ ಬೇಡಿಕೆ ಹೆಚ್ಚಾಗಿದೆ.
ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಎಳನೀರನ್ನೇ ಮಾರಾಟ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದಾಸ್ತಾನು ಕಡಿಮೆಯಾಯಿತು
ಕೊಬ್ಬರಿ ಎಣ್ಣೆ ಹಾಗೂ ತೆಂಗಿನಕಾಯಿ ಪುಡಿ ದರ ಸಹ ಏರಿಕೆ ಆಗಿರುವುದು ತೆಂಗಿನಕಾಯಿ ದರವನ್ನೂ ಹೆಚ್ಚಿಸುವಂತೆ ಮಾಡಿದೆ.
ಇದೀಗ 50 ರೂ. ತಲುಪಿದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.