ಶಿಕ್ಷಣ

“ಜ್ಞಾನದಾ ಕಲಾ ವೈಭವ – 2025” 15 ನೇ ಶಾಲಾ ವಾರ್ಷಿಕೋತ್ಸವ ಅದ್ದೂರಿ ಸಾಂಸ್ಕೃತಿಕ ಸಂಭ್ರಮಾಚರಣೆ

Views: 119

ಕನ್ನಡ ಕರಾವಳಿ ಸುದ್ದಿ : ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 15 ನೇ ಶಾಲಾ ವಾರ್ಷಿಕೋತ್ಸವ ಜ್ಞಾನದಾ ಕಲಾ ವೈಭವ -2025ಅದ್ದೂರಿಯಾಗಿ ಆಚರಿಸಲಾಯಿತು. 

ಮುಖ್ಯ ಅತಿಥಿಗಳಾದ ಕೋಟ ಪಡುಕರೆ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್ ನಾಯಕ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವಿಧ ಸಾಮಾಜಿಕ ಹಿನ್ನೆಲೆಯಲ್ಲಿ ಬರುವ ಮಗುವಿಗೆ ಉತ್ತಮ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಶಿಕ್ಷಣದ ಮೂಲಕ ಸಂಸ್ಕಾರವನ್ನು ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮಕ್ಕಳು ಬದುಕಿನ ಆರಂಭದ ಹೆಜ್ಜೆಯನ್ನು ಇಡುವಾಗ ಕನಸುಗಳನ್ನು ಕಾಣಬೇಕು ಗುರಿ ಸಾಧನೆಗೆ ಅವಿರತ ಪ್ರಯತ್ನ ಅಗತ್ಯ ನಾವೇನು ಆಗಬೇಕು ಎಂದು ಯೋಚಿಸಿದರೆ ಅದನ್ನು ಸಾಕಾರಗೊಳಿಸಲು ಸಾಧ್ಯವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ ಅದನ್ನು ಕಲಿಯಲು ಬೆಟ್ಟದಷ್ಟು ಅವಕಾಶಗಳಿವೆ, ಸರಿಯಾದ ನಿರ್ಧಾರದೊಂದಿಗೆ ಅದಕ್ಕೆ ಪೂರಕವಾದ ಪ್ರಯತ್ನದೊಂದಿಗೆ ಸಕಾರಾತ್ಮಕ ಚಿಂತನೆ ಮಾಡುವುದು ಅವಶ್ಯಕ ಈ ದಿಶೆಯಲ್ಲಿ ಪಾಲಕ ಪೋಷಕರು, ಗುರು ಹಿರಿಯರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಜವಾಬ್ದಾರಿ ಮಹತ್ತರವಾಗಿದೆ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟಿದ ಹಾಗೂ ಬೆಳೆದ ಪರಿಸರ, ನಂಬಿಕೆ, ಸಂಸ್ಕೃತಿ ಹಾಗೂ ನೆನಪುಗಳನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ ಸಂಸ್ಥೆಯ ಏಳಿಗೆಗೆ ಆಡಳಿತ ಮಂಡಳಿಯು ಸದಾ ಸಿದ್ಧರಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಅಭಿಲಾಷೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಬಿ ಶಿರೂರ್ಕರ್ ವಿದ್ಯೆಗಿಂತ ಮಿಗಿಲಾದದ್ದು ಯಾವುದು ಇಲ್ಲ ವಿದ್ಯಾರ್ಥಿಗಳು ದೇಶಪ್ರೇಮ ಮತ್ತು ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಸುಭದ್ರ ದೇಶ ಕಟ್ಟಲು ಮುನ್ನಡೆಯಬೇಕು ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸಂಸ್ಥೆ ಸದಾ ಸಿದ್ಧರಿದ್ದು ಮಕ್ಕಳ ಯಶಸ್ಸಿನೆಡೆಗೆ ನಮ್ಮ ಸಹಕಾರ ಯಾವತ್ತೂ ಸದಾ ಸಿದ್ಧವಿದೆ ಎಂದು ಆಶಾದಾಯಕ ನುಡಿಗಳನ್ನಾಡಿದರು ಹಾಗೂ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಕಲಿಕೆಯ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿರಬೇಕು, ಪ್ರಯತ್ನ ಹಾಗೂ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಮತ್ತು ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು 2024 25 ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

2025 -26ನೇ ಸಾಲಿನ ಉಡುಪಿ ಜಿಲ್ಲೆಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಂಜುನಾಥ್ ನಾಯ್ಕ್ ಮತ್ತು ಬೈಂದೂರು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಶಾ ವೀಣಾ ಡಯಾಸ್ ರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಅಭ್ಯಾಗತರನ್ನು ಫಲ ಪುಷ್ಪ ಫಲಕ ದೊಂದಿಗೆ ಸನ್ಮಾನಿಸಲಾಯಿತು ವಿದ್ಯಾರ್ಥಿ ನಾಯಕಿ ವೈಷ್ಣವಿ ಸ್ವಸ್ಥಿ ವಾಚನಗೈದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿ ಜೊತೆಗೆ 2025-26 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು.

ಕಾರ್ಯಕ್ರಮ ದಲ್ಲಿ ಗೌರವ ಅತಿಥಿಗಳಾಗಿ ಶಿಕ್ಷಕರ ಕೋಪರೆಟಿವ್ ಬ್ಯಾಂಕ್ ಉಡುಪಿ ಇದರ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಖಜಾಂಚಿ ಶ್ರೀಮತಿ ಚಂಪಾ ಆರ್ ಶಿರೂರ್ಕರ್, ವಿದ್ಯಾರ್ಥಿ ನಾಯಕಿ ಕುಮಾರಿ ವೈಷ್ಣವಿ ಸಾಂಸ್ಕೃತಿಕ ನಾಯಕಿ ಕುಮಾರಿ ಧನ್ವಿ ಭಟ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಧನ್ವಿ ಭಟ್ ಸ್ವಾಗತಿಸಿ ವೈಷ್ಣವಿ ಮತ್ತು ಸ್ವಸ್ತಿಕ್ ಕಾರ್ಯಕ್ರಮ ನಿರೂಪಿಸಿದರು ಕುಮಾರ್ ಚಕ್ರವರ್ತಿ ವಂದಿಸಿದರು.

Related Articles

Back to top button