ಇತರೆ

ಜಮ್ಮು-ಕಾಶ್ಮೀರದಲ್ಲಿ ಭೀಕರ ಬಸ್​​ ಅಪಘಾತ: 36 ಮಂದಿ ಸಾವು, 19 ಮಂದಿ ಸ್ಥಿತಿ ಗಂಭೀರ

Views: 0

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಬಸ್​​​ ಅಪಘಾತದಲ್ಲಿ ಕನಿಷ್ಠ 36 ಮಂದಿ ಅಸುನೀಗಿದ್ದಾರೆ. ಹಾಗೆಯೇ 19ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬಸ್​​ನಲ್ಲಿ 55 ಮಂದಿ ಪ್ರಯಾಣ ಮಾಡುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್​​ ಬಟೋಟ್​​-ಕಿಶ್ಟ್​​ವರ್​​​ ನ್ಯಾಷನಲ್​​ ಹೈವೇ ಸಮೀಪದ ಕಂದವೊಂದಕ್ಕೆ ಉರುಳಿದೆ. ಈ ಭೀಕರ ಬಸ್​ ದುರಂತದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಸದ್ಯ ಜಮ್ಮು-ಕಾಶ್ಮೀರ ಪೊಲೀಸ್ರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಸಂಬಂಧ ಪೊಲೀಸ್​ ಕೇಸ್​ ಕೂಡ ದಾಖಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button
error: Content is protected !!