ಇತರೆ
ಚಲಿಸುತ್ತಿದ್ದ ಟ್ರೈನ್ ಹತ್ತಲು ಹೋಗಿ ಕೆಳಗೆ ಬಿದ್ದ ಯುವಕ.. ಹೇಯ್! ಹಿಡೀರಿ, ಆತನನ್ನು ಕಾಪಾಡಿ.. ಎನ್ನುತ್ತಲೇ.. ಮುಂದೇನಾಯಿತು..?

Views: 70
ಎಷ್ಟೋ ದಿನಗಳಿಂದ ಚಲಿಸುವ ರೈಲಿನಲ್ಲಿ ಹತ್ತೋದಾಗಲಿ, ಇಳಿಯೋದಾಗಲಿ ಮಾಡಬೇಡಿ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾದ್ರೂ ಅವಘಡಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಇಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲೂ ನಡೆದಿದೆ.
ಹೌದು, ರಾಜಸ್ಥಾನದ ಜೋಧ್ಪುರ ರೈಲು ನಿಲ್ದಾಣದಲ್ಲಿ ಯುವಕನೋರ್ವ ಟ್ರೈನ್ ಹತ್ತಲು ಹೋದಾಗ ಮುಂದಕ್ಕೆ ಹೋಗಿದೆ. ಆಗ ಚಲಿಸುತ್ತಿದ್ದ ಟ್ರೈನ್ ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕರ್ತವ್ಯನಿರತ ರೈಲ್ವೆ ಪೊಲೀಸ್ರು ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಆತನನ್ನು ಗುವಾಹಟಿ ಮೂಲದ ಶಿವಪುತ್ರ ಶಿವರಾಯ್ ಎಂದು ಗುರುತಿಸಲಾಗಿದೆ. ಈತ ಜೋಧ್ಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಎನ್ನಲಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಇನ್ನು ರೈಲ್ವೆ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.








