ಧಾರ್ಮಿಕ
ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಸಂಯಮೀಂದ್ರತೀರ್ಥರ ಚಾತುರ್ಮಾಸ ವ್ರತ ಸ್ವೀಕಾರ

Views: 32
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಕಾಶಿಮಠಾಧೀಶರಾದ ಸಂಯಮೀಂದ್ರತೀರ್ಥರ ಚಾತುರ್ಮಾಸ ವ್ರತ ಸ್ವೀಕಾರ ಜುಲೈ 15ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
ಶ್ರೀ ಸಂಸ್ಥಾನ ದೇವರಿಗೆ ಪಂಚಾಮೃತ ಅಭಿಷೇಕ, 108 ಸೀಯಾಳಾಭಿಷೇಕ, ಪವಮಾನ ಅಭಿಷೇಕ, ಶತಕಲಶಾ ಭಿಷೇಕ, ಕನಕಾಭಿಷೇಕ, ಋತ್ ಸಂಹಿತಾಭಿಷೇಕ, ತಪ್ತ ಮುದ್ರಾ ಧಾರಣೆ, ವಿಶೇಷ ಪುಷ್ಪಾಲಂಕಾರ, ಮಹಾ ನೈವೇದ್ಯ, ಮಹಾಪೂಜೆ ನಡೆಯಿತು.
ಸಾಯಂಕಾಲ ದೀಪ ನಮಸ್ಕಾರ, ರಾತ್ರಿ ಪೂಜೆ, ಮೃತ್ತಿಕಾ ಪೂಜನೆಯೊಂದಿಗೆ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಸಂಪನ್ನಗೊಂಡಿತು. ರಾತ್ರಿ ನಡೆದ ಮಹಾಸಭೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕೋಟೇಶ್ವರ ಪೇಟೆಯಲ್ಲಿ ಸರ್ವ ಅಲಂಕಾರದೊಂದಿಗೆ ಶೃಂಗಾರಗೊಂಡಿದೆ.