ಕೊಲ್ಲೂರು ದೇವಸ್ಥಾನದಲ್ಲಿ ಜನಜಂಗುಳಿಯ ಮಧ್ಯೆ ಮಹಿಳೆಯ ಕುತ್ತಿಗೆಯಲ್ಲಿದ್ದ ಸರಕಳ್ಳತನ

Views: 173
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ದೇವಸ್ಥಾನದಲ್ಲಿ ಜನಜಂಗುಳಿಯ ಮಧ್ಯೆ ಮಹಿಳೆಯ ಕುತ್ತಿಗೆಯಲ್ಲಿದ್ದ ಸರಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ಜಯಂತಿ ಮುದ್ರಾಡಿ ಹೆಬ್ರಿ ಇವರು ಮಗಳು ಪ್ರತಿಮಾ ಹಾಗೂ ಅಳಿಯ ದೀರಜ್ ನೊಂದಿಗೆ ಕಾರಿನಲ್ಲಿ ಪ್ರಯಾಣಿಸಿ ಶುಕ್ರವಾರ ಮಧ್ಯಾಹ್ನ 12:30 ಗಂಟೆಗೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿರುತ್ತಾರೆ.
ಪ್ರತಿಮಾ ಹಾಗೂ ಅಳಿಯ ದೀರಜ್ ರವರು ಕ್ಯೂನಲ್ಲಿ ನಿಂತುಕೊಂಡ ಸಮಯ ಜಯಂತಿಯವರು ಶ್ರೀ ವೀರಭದ್ರ ದೇವರಿಗೆ ಕೈ ಮುಗಿದು ಬರುವುದಾಗಿ ಹೇಳಿ ಅಲ್ಲಿಗೆ ಹೋದ ಸಮಯ ಏಕಾಏಕಿ ಜೋರಾಗಿ ಮಳೆ ಬಂದಿದ್ದು ಈ ಸಮಯ ದೇವಸ್ಥಾನದ ಹೊರಾಂಗಣದಲ್ಲಿ ನೆರೆದ ಜನರು ಒಮ್ಮೇಲೆ ವೀರಭದ್ರ ದೇವರ ಗುಡಿಯ ಕಡೆಗೆ ನುಗ್ಗಿ ಜಯಂತಿಯವರ ಮೈ ಮೇಲೆ ಬಿದ್ದಿದ್ದು, ಜನರು ಹೋದ ಬಳಿಕ ಮಗಳಿದ್ದ ಕ್ಯೂ ಸ್ಥಳಕ್ಕೆ ಹೋಗಿ ನೋಡಲಾಗಿ ಜಯಂತಿಯವರ ಕುತ್ತಿಗೆಯಲ್ಲಿದ್ದ 5 ಪವನ್ ಇರುವ ಚಿನ್ನದ ಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ತಿಳಿದಿರುತ್ತದೆ.
ಮಧ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ಮಧ್ಯೆ ಅವಧಿಯಲ್ಲಿ ಶ್ರೀ ವೀರಭದ್ರ ದೇವರ ಗುಡಿಯಲ್ಲಿ ಇರುವ ಸಮಯದಲ್ಲಿ ಯಾರೋ ಕಳ್ಳರು ಜಯಂತಿ ಯವರ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.