ಧಾರ್ಮಿಕ

ಕೊಲ್ಲೂರು ದೇವಳಕ್ಕೆ ದುರ್ಗಾ ಸ್ಟಾಲಿನ್ ಗೆಳತಿಯೊಂದಿಗೆ ಬೇಟಿ ನೀಡಿ ಚಿನ್ನದ ಕಿರೀಟ ಅರ್ಪಿಣೆ

Views: 153

ಕನ್ನಡ ಕರಾವಳಿ ಸುದ್ದಿ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಸಚಿವ ಉದಯನಿಧಿ ಸ್ಟಾಲಿನ್  ಅವರ ತಾಯಿ ಇಂದು ಮಾ.08 ರಂದು ಶನಿವಾರ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ದೈವ ಭಕ್ತೆಯಾಗಿರುವ ದುರ್ಗಾ ಸ್ಟಾಲಿನ್ ಅಗಾಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ದಕ್ಷಿಣ ಭಾರತದ ಬೇರೆ ಬೇರೆ ದೇವಾಲಯಗಳಿಗೆ ಭೇಟಿ ನೀಡಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿರುತ್ತಾರೆ.

ಈ ಬಾರಿ ಗೆಳತಿಯೊಂದಿಗೆ ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಅವರ ಜೊತೆಗೆ ಅವರ ಸ್ನೇಹಿತೆ ದೇವರಿಗೆ ಚಿನ್ನದ ಕಿರೀಟ ಅರ್ಪಿಸಿದ್ದಾರೆ.

 

 

Related Articles

Back to top button