ಸಾಂಸ್ಕೃತಿಕ
“ಕೃಷ್ಣಗಾನ ಸಭಾ”ಕ್ಕೆ ವಿದುಷಿ ಯುಕ್ತಿ ಉಡುಪ ಬಳ್ಕೂರು ಆಯ್ಕೆ

Views: 64
ಕನ್ನಡ ಕರಾವಳಿ ಸುದ್ದಿ:ದೇಶದ ಪ್ರತಿಷ್ಟಿತ ವೇದಿಕೆಯಲ್ಲಿ ಒಂದಾದ, ಚೆನ್ನೈನ, “ಕೃಷ್ಣ ಗಾನ ಸಭಾ”ದಲ್ಲಿ ಭರತನಾಟ್ಯ ಪ್ರದರ್ಶಿಸಲು ವಿದುಷಿ ಯುಕ್ತಿ ಉಡುಪ ಬಳ್ಕೂರು ಆಯ್ಕೆಯಾಗಿರುತ್ತಾರೆ. ಜನವರಿ 8 ರ ಸಂಜೆ 5:30 ರಿಂದ 6:45 ರ ತನಕ ನಡೆಯುವ ಈ ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ವಿದುಷಿ ಪ್ರವಿತ ಅಶೋಕ್, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್, ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ, ಹಾಗೂ ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಸಹಕರಿಸಲಿದ್ದಾರೆ. ವಿದುಷಿ ಯುಕ್ತಿ ಉಡುಪ ಅವರು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತ ಅಶೋಕ್ ರವರ ಶಿಷ್ಯೆಯಾಗಿದ್ದು, ಬಳ್ಕೂರು ರಾಘವ ಉಡುಪ ಹಾಗೂ ಶ್ರಿಕಾಂತಿ ಉಡುಪರ ಪುತ್ರಿಯಾಗಿರುತ್ತಾಳೆ






