ಇತರೆ

ಕುಂದಾಪುರ: ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗಂಗೊಳ್ಳಿ ಮೀನುಗಾರಿಕೆ ಬೋಟ್ ಗಳು ; ಕೋಟ್ಯಾಂತರ ರೂ.ನಷ್ಟ

Views: 2

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಹತ್ತು ಮೀನುಗಾರಿಕ ಬೋಟಿಗೆ ಬೆಂಕಿ ತಗುಲಿದ್ದು ಸುಟ್ಟು ಕರಕಲಾಗಿದೆ‌ ಎಂದು ಮಾಹಿತಿ‌ ತಿಳಿದು ಬಂದಿದೆ.

ಈ ದುರ್ಘಟನೆಯು ಪಟಾಕಿಯ ಕಿಡಿಯಿಂದ ಸಂಭವಿಸಲಾಗಿದೆ ಎಂದು ಶಂಕಿಸಲಾಗಿದೆ.

ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ತಿಳಿಯಬೇಕಷ್ಟೇ

Related Articles

Back to top button
error: Content is protected !!