ಇತರೆ

ಕುಂದಾಪುರ: ಆಜ್ರಿ ಬೈಕ್ ಅಪಘಾತ ಸ್ಥಿತಿಯಲ್ಲಿ ಶವ ಪತ್ತೆ,..ಕೊಲೆ ಶಂಕೆ?

Views: 0

ಆಜ್ರಿ ಗ್ರಾಮದ ಗೋರಿಜೆಡ್ಡು ಎಂಬಲ್ಲಿ ಬೈಕ್ ಅಪಘಾತವಾಗಿ ಮೃತಪಟ್ಟ ರೀತಿಯಲ್ಲಿ ಹಳ್ಳಿಹೊಳೆ ಮಂಜುನಾಥ (36 )ಅವರ ಮೃತದೇಹವು ನವೆಂಬರ್ 30ರಂದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಗಮನಿಸಿದಾಗ ಇದೊಂದು ಕೊಲೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಪಘಾತ ಸ್ಥಳದ ಹತ್ತಿರದಲ್ಲಿ ಬೈಕ್ ಅಪಘಾತವಾದ ರೀತಿಯಲ್ಲಿ ಬಿದ್ದಿದ್ದು, ಹೆಲ್ಮೆಟ್ ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ. ಮೃತ ಮಂಜುನಾಥ್ ಅವರ ಬಲಕಣ್ಣಿನ ಹಣೆಯ ಮೇಲೆ ಆಯುಧದಿಂದ ತಿವಿದ ಸ್ವರೂಪದ ಆಳವಾದ ಗಾಯವಾಗಿದೆ.

ಮೃತ ಶರೀರದ ಪಕ್ಕದಲ್ಲಿಯೇ ಒಂದು ಜೊತೆ ಶೂ ಕೂಡ ಪತ್ತೆಯಾಗಿದೆ. ರಕ್ತ ಸಿಕ್ತ ಹೆಜ್ಜೆ ಗುರುತುಗಳು ಇದ್ದು ಅಪಘಾತದ ಬಗ್ಗೆ ಸಂಶಯ ಇದೆ ಎಂದು ಮೃತರ ಸಹೋದರ ಸತೀಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣವನ್ನು ಶಂಕರನಾರಾಯಣ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Related Articles

Back to top button
error: Content is protected !!