ಇತರೆ

ಕುಂದಾಪುರ:ಪ್ರತ್ಯೇಕ ಪ್ರಕರಣ: ಇಬ್ಬರ ಸಾವು

Views: 0

ಕುಂದಾಪುರ: ಎರಡು ಪ್ರತ್ಯೇಕ ಪ್ರಕರಣದಲ್ಲಿ ನೀರಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಸತ್ಯವತಿ ಅವರು ಮಳಿ ತೆಗೆಯುವ ಕೆಲಸಕ್ಕ ಪಂಚಗಂಗಾವಳಿ ಹೊಳೆಗೆ ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.

ರಾತ್ರಿಯಾದರೂ ವಾಪಾಸು ಬರದೇ ಇದ್ದು ಸುತ್ತಲಿನ ಪರಿಸರದಲ್ಲಿ ಹುಡುಕಾಡಿದಾಗ ಪತ್ತೆಯಾಗಿರಲಿಲ್ಲ. ಖಾರ್ವಿ ಕೇರಿಯ ರಿಂಗ್‌ ರೋಡ್‌ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ನ. 11ರಂದು ಮೃತದೇಹ ದೊರೆತಿತ್ತು. ಮೃತರ ಸಹೋದರ ಸಂದೀಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಕೋಟೇಶ್ವರ ಗ್ರಾಮದ ಮೆಜೆಸ್ಟಿಕ್‌ ಹಾಲಿನ್‌ ಸಮೀಪದ ಹಲಸಿನಕಟ್ಟೆ ಎಂಬಲ್ಲಿ ವಾಸವಿರುವ ಜಿ. ರಾಜೇಶ (53) ಅವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಕೆಲಸ ಮಾಡುತ್ತಿದ್ದು 3-4 ವರ್ಷಗಳಿಂದ ಆರೋಗ್ಯ ಸಮಸ್ಯೆ ಹೊಂದಿದ್ದು, ಚಿಕಿತ್ಸೆಯಲ್ಲಿದ್ದರು ಎಂದು ತಿಳಿದುಬಂದಿದೆ.

 

Related Articles

Back to top button
error: Content is protected !!