ಯುವಜನ
ಕಾರ್ಕಳ: ರಸ್ತೆ ಬದಿ ನಿಂತಿದ್ದ ಯುವತಿಗೆ ಬಸ್ ಢಿಕ್ಕಿ
Views: 57
ಕನ್ನಡ ಕರಾವಳಿ ಸುದ್ದಿ:ಕಾರ್ಕಳ ಸಾಣೂರು ಗ್ರಾಮದ ಮುರತ್ತಂಗಡಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಇರ್ವತ್ತೂರು ಗ್ರಾಮದ ನಂದಾ ಅತಿಕಾರಿ (18) ಅವರಿಗೆ ಬಸ್ ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಆಗಮಿಸಿದ್ದ ಅವರು ಮುರತ್ತಂಗಡಿಯಲ್ಲಿ ನಿಂತಿದ್ದಾಗ ಕಾರ್ಕಳ ಕಡೆಗೆ ವೇಗವಾಗಿ ಧಾವಿಸಿ ಬಂದ ಬಸ್ ಢಿಕ್ಕಿ ಹೊಡೆಯಿತು. ಯುವತಿ ಡಾಮರು ರಸ್ತೆಗೆ ಬಿದ್ದು ಗಾಯಗೊಂಡರು. ಕಾರ್ಕಳದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






