ಇತರೆ
ಕಾರು ಪಲ್ಟಿ:ಚಾಲಕ ಸಾವು

Views: 44
ಕಲಬುರಗಿ : ತಾಲೂಕಿನ ಅವರಾದ ಗ್ರಾಮದ ಹತ್ತಿರ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿ ಕಾರು ಚಾಲಕ ಸಾವಿಗೀಡಾಗಿದ್ದಾನೆ.
ಕಾರಿನ ಮಾಲೀಕ ಮತ್ತು ಚಾಲಕ ದಸ್ತಗೀರಸಾ ಸಬ್ದರ್ಸಾ ಮಕಾನದಾರ ಮೃತ ವ್ಯಕ್ತಿ.
ಸ್ವಂತ ಕಾರು ಹೊಂದಿದ್ದ ದಸ್ತಗೀರಸಾ ಕಾರು ಬಾಡಿಗೆಗೆ ಓಡಿಸುತ್ತಿದ್ದರು. ಸ್ವಂತ ಊರು ಕುರಿಕೋಟಾಕ್ಕೆ ಕಾರಿನಲ್ಲಿ ಹೊರಟಾಗ , ಕಾರು ಉರುಳಿ ರಸ್ತೆ ಪಕ್ಕದ ಮುಳ್ಳುಕಂಟಿಯಲ್ಲಿ ಬಿದ್ದಿದೆ.
ಸಂಚಾರಿ 2 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






