ರಾಜಕೀಯ

ಎನ್‌ಡಿಎ-3ನೇ ಮೈತ್ರಿ ಸರ್ಕಾರದಲ್ಲಿ ಲೋಕಸಭೆಯ ಓಂ ಬಿರ್ಲಾ ಸ್ಪೀಕರ್‌ ಸ್ಥಾನ ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ?

Views: 32

ನವದೆಹಲಿ: ಎನ್‌ಡಿಎ-3ನೇ ಮೈತ್ರಿ ಸರ್ಕಾರದಲ್ಲಿ ಲೋಕಸಭೆಯ ಸ್ಪೀಕರ್‌ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಹಿಂದಿನ ಸರ್ಕಾರದಲ್ಲಿ ಲೋಕಸಭಾ ಅಧ್ಯಕ್ಷರಾಗಿದ್ದ ಓಂ ಬಿರ್ಲಾ ಅವರೇ ಇನ್ನೊಂದು ಅವಧಿಗೆ ಮುಂದುವರಿಯಬಹುದು ಎಂದು ತಿಳಿದು ಬಂದಿದೆ.

ಲೋಕಸಭಾದ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ನಿರ್ಧರಿಸಲಿದ್ದು, ಬಿಜೆಪಿಯ ಮಿತ್ರಪಕ್ಷಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಬಹುದು ಎಂದು ಮೂಲಗಳು ಹೇಳುತ್ತವೆ

ಇದೇ ಜೂನ್‌ 24ರಿಂದ ಪ್ರಾರಂಭವಾಗುವ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುಂಚಿತವಾಗಿ, ಸ್ಪೀಕರ್‌ ಆಯ್ಕೆಯ ಬಗ್ಗೆ ಒಮ್ಮತಕ್ಕೆ ಬರಲು ಎನ್‌‍ಡಿಎ ಮಿತ್ರಪಕ್ಷಗಳ ನಿರ್ಣಾಯಕ ಸಭೆಯು ಈ ವಾರ ನಡೆಯಲಿದೆ. ಈ ಸಭೆಯಲ್ಲಿ ಮಿತ್ರಪಕ್ಷಗಳಿಗೆ ಒಪ್ಪಿಗೆಯಾಗುವ ಸ್ಪೀಕರ್‌ ಆಯ್ಕೆ ಮಾಡುವುದು ಬಿಜೆಪಿ ಉದ್ದೇಶ. ಮಿತ್ರಪಕ್ಷಗಳೊಂದಿಗಿನ ಸಭೆಯಯಲ್ಲಿ ನಿರ್ಣಯವಾಗಲಿದೆ.

ಜೂನ್‌ 26 ರಂದು ಪ್ರಧಾನ ಮಂತ್ರಿಯಿಂದ ಹೆಸರಿನ ಅಂತಿಮ ಘೋಷಣೆಯಾಗಲಿದೆ. ಇದೇ ದಿನ ಲೋಕಸಭಾಧ್ಯಕ್ಷರ ಹುದ್ದೆಗೆ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಇದು ಒಕ್ಕೂಟದ ಕಾರ್ಯತಂತ್ರದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಬಿಜೆಪಿ ನಾಯಕರು. ಜೂನ್‌ 26ರೊಳಗೆ ಸ್ಪೀಕರ್‌ ಆಯ್ಕೆಗೆ ಸರಿಯಾದ ಕ್ರಮವನ್ನು ರೂಪಿಸಲು ಜೂ.20ರಂದು ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

Related Articles

Back to top button
error: Content is protected !!