ಕುಂದಾಪುರ:ಎಂಜಿನಿಯರ್ ಎಂದು ಸುಳ್ಳು ಹೇಳಿ ಮದುವೆಯಾದಾತನಿಂದ ವರದಕ್ಷಿಣೆ ಕಿರುಕುಳ

Views: 237
ಕನ್ನಡ ಕರಾವಳಿ ಸುದ್ದಿ: ಮಂಗಳೂರಿನ ಎಂಆರ್‌ಪಿಲ್‌ನಲ್ಲಿ ಮೆಕಾನಿಕಲ್ ಎಂಜಿನಿಯರ್ ಎಂದು ಸುಳ್ಳು ಹೇಳಿ 2023ರ ಡಿಸೆಂಬರ್ 8ರಂದು ಕುಂದಾಪುರದಲ್ಲಿ ವಿವಾಹವಾದ ಮರೋಳಿ ನಿವಾಸಿ ನಿತೇಶ್ ಎನ್. ಈಗ ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಪತ್ನಿ ಕುಂದಾಪುರದ ನಿವಾಸಿ ಸುಷ್ಮಾ (26) ದೂರು ನೀಡಿದ್ದಾರೆ.
ಮದುವೆಯಾದ ವಾರದೊಳಗೆ ಕೆಲಸದ ವಿಚಾರವಾಗಿ ಸುಳ್ಳು ಹೇಳಿರುವುದಾಗಿ ತಿಳಿದಿದ್ದು, 4-5 ದಿನಗಳಲ್ಲಿಯೇ ಪತಿ ನಿತೇಶ್ ನೀನು ಅಲ್ಲಿಗೆ ಯಾಕೆ ಹೋದೆ, ಅವರ ಹತ್ತಿರ ಯಾಕೆ ಮಾತನಾಡಿದೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದರು. ಜತೆಗೆ ಆತನ ಸಂಬಂಧಿಕರಾದ ನಾಗೇಶ್ ಕೆ., ವಿಮಲಾ, ಪಲ್ಲವಿ, ಪ್ರತೀಕ್ ಕೂಡ ಮಾನಸಿಕ ಹಿಂಸೆ ನೀಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮಗೆ ಮನೆ ಕಟ್ಟಲು ಸಹಾಯ ಮಾಡಬೇಕು. ತಂದೆ- ತಾಯಿಯಿಂದ 60 ಲಕ್ಷ ರೂ. ತೆಗೆದುಕೊಂಡು ಬರಬೇಕು. ಇಲ್ಲದಿದ್ದರೆ ವಿಚ್ಛೇದನ ಕೊಡಿಸುವುದಾಗಿ ಬೆದರಿಸಿ, ಕೊಲೆ ಬೆದರಿಕೆ ಸಹ ಹಾಕಿ ನನಗೆ ಹಾಗೂ ನನ್ನ ತಂದೆ ತಾಯಿಗೆ ಹಲ್ಲೆ ಮಾಡಿರುವುದಾಗಿ ಸುಷ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.