ಸಾಂಸ್ಕೃತಿಕ
ಉಭಯ ತಿಟ್ಟಿನ ಖ್ಯಾತ ಭಾಗವತ ಹೆಬ್ರಿ ಗಣೇಶ್ ಕುಮಾರ್ ಪುತ್ರ ಅಮೃತ್ ರಾಜ್ ಸಾವು
Views: 437
ಕನ್ನಡ ಕರಾವಳಿ ಸುದ್ದಿ: ತೆಂಕು ಬಡಗು ಉಭಯತಿಟ್ಟಿನ ಖ್ಯಾತ ಭಾಗವತ ಹೆಬ್ರಿ ಗಣೇಶ್ ಕುಮಾರ್ ಅವರ ಪುತ್ರ ಅಮೃತ್ ರಾಜ್ (22) ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಮಂಗಳೂರು ಎಜೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ, ಅವರಿಗೆ ಅಪರೂಪದ ಅನ್ನನಾಳದ ಕ್ಯಾನ್ಸರ್ ನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಜೀವನ್ಮರಣ ಸ್ಥಿತಿಗೆ ಒಳಗಾಗಿ ಚಿಕಿತ್ಸೆ ಪಡೆಯತ್ತಿದ್ದು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.