ಧಾರ್ಮಿಕ

ಉಡುಪಿಯಲ್ಲಿ ಜೀವಂತ ನಾಗನಿಗೆ ವಿಶೇಷ ಪೂಜೆ..! 

Views: 312

ಉಡುಪಿ: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಹುತ್ತಕ್ಕೆ ಹಾಲೆರೆಯೋದು, ನಾಗಬನದಲ್ಲಿ ವಿಶೇಷ ಪೂಜೆ ಮಾಡೋದು ಮುಂತಾದ ಭಕ್ತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಭಕ್ತರು ಕಲ್ಲು ನಾಗನಿಗೆ ಹಾಲೆರೆದರೆ ಉಡುಪಿಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ. ನಾಗದೇವರಿಗೆ ಜಲಾಭಿಷೇಕ, ಸೀಯಾಳಾಭಿಷೇಕ ಮಾಡಿದ ಕಾಪು ಮೂಲದ ಮಜೂರು ಗ್ರಾಮದ ಗೋವರ್ಧನ್ ರಾವ್ ಅವರು ಪ್ರತೀ ವರ್ಷವೂ ಜೀವಂತ ನಾಗನಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿ ಆಚರಿಸುತ್ತಿದ್ದಾರೆ. ಗಾಯಗೊಂಡ ನಾಗಗಳನ್ನು ತಂದು ಆರೈಕೆ ಮಾಡುತ್ತಿದ್ದಾರೆ. ಈ ಬಾರಿ 4 ನಾಗ ಮನೆಯಲ್ಲಿದ್ದು, ಆರೈಕೆಗೊಂಡ ನಾಗ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಕುಟುಂಬ ಸಮೇತರಾಗಿ ಅಭಿಷೇಕ ನಡೆಸಿ, ಆರತಿ ಬೆಳಗಿ ಪೂಜೆ ಮಾಡಿದ್ದಾರೆ. ಗಾಯಗೊಂಡ ನಾಗರ ಹಾವುಗಳನ್ನು ಚಿಕಿತ್ಸೆ ನಡೆಸುವ ಗೋವರ್ಧನ್ ರಾವ್ ಅವರು ಸದ್ಯ ಆರು ಹಾವುಗಳ ಆರೈಕೆ ಮಾಡುತ್ತಿದ್ದಾರೆ.

 

 

Related Articles

Back to top button
error: Content is protected !!