ಇತರೆ
ಉಡುಪಿ:ನಿವೃತ್ತ ಬ್ಯಾಂಕ್ ಉದ್ಯೋಗಿಯ ಶವ ಬಾವಿಯಲ್ಲಿ ಪತ್ತೆ

Views: 0
ಉಡುಪಿ: ಉಡುಪಿಯ ಒಳಕಾಡು ನಾರಾಯಣ ರಾವ್ ಕಂಪೌಂಡಿನ ನಿವೃತ್ತ ಬ್ಯಾಂಕ್ ಉದ್ಯೋಗಿ 65ರ ಹರೆಯದ ಸದಾನಂದ ಕುಂದರ್ ಶವ ಮನೆ ಎದುರಿನ ಬಾವಿಯಲ್ಲಿ ಸಿಕ್ಕಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಕಾಡುತ್ತಿವೆ.
ಅಗ್ನಿಶಾಮಕ ದಳ ಶವವನ್ನು ಬಾವಿಯಿಂದ ಹೊರತೆಗೆಯಲು ಸಹಕರಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಅರುಣ್ ಹಂಗಾರಕಟ್ಟೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು. ವೈದ್ಯಕೀಯ ತಪಾಸಣೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ






