ಸಾಮಾಜಿಕ

ಇಬ್ಬರು ಯುವತಿಯರ ಜೊತೆ ಹಸೆಮಣೆ ಏರಿದ ಯುವಕ 

Views: 1164

ಕನ್ನಡ ಕರಾವಳಿ ಸುದ್ದಿ:ಅಪರೂಪದ ಪ್ರಕರಣ ಬೆಳಕಿದೆ ಬಂದಿದೆ.ಇಬ್ಬರು ಯುವತಿಯರ ಜೊತೆ ಯುವಕನೊಬ್ಬ ಹಸೆಮಣೆಯನ್ನೇರಿದ್ದಾನೆ.

ಚಿತ್ರದುರ್ಗ ನಗರದ ಎಂ.ಕೆ ಪ್ಯಾಲೆಸ್ ಹಾಲ್ನಲ್ಲಿ ಇಬ್ಬರು ವಧುಗಳ ಜೊತೆ ಒಬ್ಬ ವರ ಕೈಹಿಡಿದಿದ್ದಾನೆ. ವಸೀಂ ಶೇಕ್ ಎಂಬ ಯುವಕ ಶೈಪಾ ಶೇಕ್ ಹಾಗು ಜನ್ನತ್ ಮುಖಂದರ್ ಎಂಬ ಯುವತಿಯರ ಜೊತೆ ಹಸೆಮಣೆಯೇರಿದ್ದಾನೆ.

ಈ ವಿಶಿಷ್ಟ ಮದುವೆಯು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕುಟುಂಬದ ಸಮ್ಮುಖದಲ್ಲೇ ಈ ಮದುವೆಯಾಗಿರುವುದು ವಿಶೇಷವಾಗಿದೆ. ಸದ್ಯ ಯುವತಿಯರ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟು, ವಧುಗಳನ್ನು ಕೈ ಹಿಡಿದು ವರ ಅಪ್ಪಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಒಂದು ಸಂಸಾರವನ್ನೇ ನಿಭಾಯಿಸಲಾಗದ ಈ ಕಾಲದಲ್ಲಿ, ಇಬ್ಬರು ಯುವತಿಯರನ್ನು ಮದುವೆಯಾಗಿರುವ ಈ ಭೂಪನ ಧೈರ್ಯ ಮೆಚ್ಚಲೇಬೇಕು ಅಂತಿದ್ದಾರೆ ಜನ.

Related Articles

Back to top button