ಇಟ್ಕೊಂಡವಳಿಗಾಗಿ ಕಟ್ಕೊಂಡವಳ ಜೀವ ತೆಗೆದ ಪ್ರಕರಣ ಬಯಲು!
Views: 141
ಕನ್ನಡ ಕರಾವಳಿ ಸುದ್ದಿ:ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದ ಅಂಜಲಿಗೆ ಗಂಡ ಅಂದ್ರೆ ಪ್ರಾಣ ಈ ಸಮೀರ್ ಜಾಧವ್ ಸ್ವಂತ ಗ್ಯಾರೇಜ್ ನಡೆಸುತ್ತಿದ್ದ.. ಈ ಸುಂದರ ಕುಟುಂಬಕ್ಕೆ ಹುಳಿ ಹಿಂಡಿದ್ದು ಸಮೀರ್ ಗೆ ಇದ್ದ ಅಫೇರ್. ಇದಕ್ಕಾಗಿ ತಿಂಗಳುಗಳಿಂದ ಸಮೀರ್ ಪ್ಲಾನ್ ಮಾಡಿದ್ದ
ತನ್ನ ಹೊಸ ಗ್ಯಾರೇಜ್ ಪಕ್ಕದಲ್ಲಿ ದೊಡ್ಡ ಗೋಡೌನ್ ಬಾಡಿಗೆಗೆ ಪಡೆದಿದ್ದ. ಬಳಿಕ ಅಲ್ಲಿ ಸೀಸ, ಕಬ್ಬಿಣ ಕರಗಿಸುವ ಬಾಯ್ಲರ್ ರೆಡಿ ಮಾಡಿದ್ದ. ಇದು ತನ್ನ ಗ್ಯಾರೇಜ್ ಹಾಗೂ ಕೆಲಸಕ್ಕೂ ಬಳಕೆಯಾಗುವ ರೀತಿಯಲ್ಲಿ ರೆಡಿ ಮಾಡಿಟ್ಟಿದ್ದ. ಬಳಿಕ ಪತ್ನಿಯನ್ನು ತನ್ನ ಹೊಸ ಗೋಡೌನ್ ನೋಡಲು ಬಾ ಎಂದು ಕರೆದುಕೊಂಡು ಹೋಗಿದ್ದಾನೆ.
ದೀಪಾವಳಿ ರಜೆ ಕಾರಣದಿಂದ ಮಕ್ಕಳು ಊರಿಗೆ ತೆರಳಿದ್ರು. ಗಂಡ ಉದ್ಯಮದಲ್ಲಿ ಬೆಳೆಯುತ್ತಿದ್ದಾನೆ ಎಂದು ಖುಷಿಯಲ್ಲಿದ್ದ ಅಂಜಲಿ, ಗೋಡೌನ್ ನೋಡಲು ಹೋಗಿದ್ದಾಳೆ. ಗೋಡೌನ್ ಒಳಗೆ ಬಂದ ಬಳಿಕ ಈತ ಆಕೆಯನ್ನ ಹತ್ಯೆಮಾಡಿದ್ದಾನೆ. ಬಳಿಕ ಈಕೆಯ ಮೃತದೇಹವನ್ನು ಸೀಸ, ಕಬ್ಬಿಣ ಕರಗಿಸುವ ಬ್ರಾಯ್ಲರ್‌ನಲ್ಲಿ ಸುಟ್ಟು ಭಸ್ಮಮಾಡಿದ್ದಾನೆ.. ಈಕೆಯ ಭಸ್ಮವನ್ನು ಹತ್ತಿರದ ನದಿಗೆ ಚೆಲ್ಲಿದ್ದಾನೆ.
ಸಮೀರ್ ಜಾಧವ್ ದೃಶ್ಯಂ ಸಿನಿಮಾ ಸ್ಪೂರ್ತಿಯಾಗಿಟ್ಟುಕೊಂಡು ಹೆಣೆದ ಕತೆಯಲ್ಲಿ ಕೆಲ ಟ್ವಿಸ್ಟ್ ಕೂಡ ನೀಡಿದ್ದಾನೆ. ಪತ್ನಿಯ ಹತ್ಯೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಇತ್ತ ಅಂಜಲಿ ಫೋನ್‌ನಿಂದ ಹತ್ಯೆ ಮೊದಲು ಪತ್ನಿಗೆ ಗೊತ್ತಿಲ್ಲದ ರೀತಿ ತನ್ನ ಗೆಳೆಯನಿಗೆ ಐ ಲವ್ ಯೂ ಎಂದು ಮೆಸೇಜ್ ಕಳುಹಿಸಿದ್ದ.. ಇದರ ನಡುವೆ ಸಮೀರ್ ಜಾದವ್ ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನು ಪತ್ತೆ ಹಚ್ಚುವಂತೆ ಮನವಿ ಮಾಡುತ್ತಲೇ ಇದ್ದ. ಸಮೀರ್ ಪದೇ ಪದೇ ಪೊಲೀಸ್ ಠಾಣೆಗೆ ಭೇಟಿ ಪೊಲೀಸರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.. ಪೊಲೀಸ್ ಭಾಷೆಯಲ್ಲಿ ರುಬ್ಬಿದಾಗ ಗೋಡೌನ್ ಹತ್ಯೆ ಸತ್ಯ ಹೊರಬಂದಿದೆ..






