ಸಾಮಾಜಿಕ
ಆಸ್ತಿಗಾಗಿ ಗಂಡನನ್ನೇ ಗೃಹ ಬಂಧನದಲ್ಲಿಟ್ಟ ಪತ್ನಿ
Views: 136
ಕನ್ನಡ ಕರಾವಳಿ ಸುದ್ದಿ: ಆಸ್ತಿಗಾಗಿ ಗಂಡನನ್ನೇ ಪತ್ನಿ ಗೃಹ ಬಂಧನದಲ್ಲಿಟ್ಟ ಗಂಭೀರ ಆರೋಪ ಕೇಳಿಬಂದಿದೆ.
ಬೆಟಗೇರಿಯ ಕಲಬುರಗಿ ಓಣಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕಳೆದ 15 ದಿನಗಳಿಂದ ತಗಡಿನ ರೂಮ್ ನಲ್ಲಿ ಪತಿಯನ್ನು ಕೂಡಿ ಹಾಕಿದ್ದಳು ಎಂಬ ಆರೋಪ ಇದೆ. ಪತ್ನಿ ಶೋಭಾ ಪತಿ ಗಜಾನನನ್ನ ಕೂಡಿ ಹಾಕಿದ್ದಾಳೆ.
ಗಜಾನನ ಹೆಸರಲ್ಲಿ ಬೇಕಾದಷ್ಟು ಆಸ್ತಿ ಇದೆ. ಅದಕ್ಕಾಗಿ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ನಿತ್ಯ ಕರ್ಮಕ್ಕೂ ಬಿಡದೇ ಕೂಡಿ ಹಾಕಿರೋದಕ್ಕೆ ಅಕ್ಕಪಕ್ಕದ ಜನರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಪೊಲೀಸರಿಗೆ ಗೊತ್ತಾಗ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಗಜಾನನಿಗೆ ಬಂಧ ಮುಕ್ತ ಕರುಣಿಸಿದ್ದಾರೆ.
ನಾವು ಕೂಡಿ ಹಾಕಿಲ್ಲ. ನನ್ನ ಪತಿ ಮಾನಸಿಕ ಅಸ್ವಸ್ಥ. ಆತ ತನ್ನ ಆಸ್ತಿಯನ್ನು ಸಹೋದರಿಯರಿಗೆ ಕೊಡ್ತಿದ್ದಾನೆ. ಹೀಗಾಗಿ ಆತನನ್ನು ಮನೆಯಲ್ಲಿ ಇಟ್ಟಿದ್ದೇವೆ ಎಂದು ಕತೆ ಹೇಳಿದ್ದಾಳೆ. ಇತ್ತ ಗಜಾನನ ಪರವಾಗಿರೋರು, ಮನೆಯಿಂದ ಹೊರ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.






