ಧಾರ್ಮಿಕ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಅಶಕ್ತ 54 ಫಲಾನುಭವಿಗಳಿಗೆ ನೆರವು ಹಸ್ತಾಂತರ

Views: 39

ಕನ್ನಡ ಕರಾವಳಿ ಸುದ್ದಿ:  ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 2025-2026ನೇ ಸಾಲಿನ ದೈಹಿಕವಾಗಿ ಅಶಕ್ತರಾಗಿರುವ 54 ಫಲಾನುಭವಿಗಳಿಗೆ ಸುಮಾರು ರೂ. ಐದೂವರೆ ಲಕ್ಷ ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಯಿತು.

ಆಡಳಿತ ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯರು ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ಶ್ರೀದೇವಳವು ಸಮಾಜಮುಖಿಯಾಗಿ ತೆರೆದುಕೊಂಡಿದ್ದು, ಪ್ರತಿ ವರ್ಷವೂ ದೈಹಿಕ ಆಶಕ್ತರಿಗೆ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವಿವಿಧ ಶಾಲೆಗಳು, ಸಂಘ ಸಂಸ್ಥೆಗಳಿಗೆ ಅನುದಾನವನ್ನು ಪ್ರಸಾದ ರೂಪವಾಗಿ ನೀಡುತ್ತಾ ಬಂದಿದೆ. ಪ್ರಸಾದ ರೂಪವಾಗಿ ವೈದ್ಯಕೀಯ ನೆರವನ್ನು ಪ್ರತಿ ವರ್ಷ ದೈಹಿಕ ಆಶಕ್ತರಿಗೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿವಿಧ ಶಾಲೆಗಳು, ಸಂಘ ಸಂಸ್ಥೆಗಳಿಗೆ ನೆರವು ಪಡೆದ ಅಶಕ್ತ ಫಲಾನುಭವಿಗಳು ಶ್ರೀ ವಿನಾಯಕನ ಅನುಗ್ರಹದಿಂದ ಶೀಘ್ರವಾಗಿ ಚೇತರಿಸಿಕೊಂಡು ಎಲ್ಲರಿಗೂ ಆಯುರಾರೋಗ್ಯ ಆನಂದ ಐಶ್ವರ್ಯವನ್ನು ಕೊಟ್ಟು ಇಷ್ಟಾರ್ಥವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಿವೃತ್ತ ಆಡಳಿತ ಧರ್ಮದರ್ಶಿಗಳಾದ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು, ಕಚೇರಿಯ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!