ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ
Views: 27
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅಧಿಕೃತ ಯೂಟ್ಯೂಬ್ ಚಾನೆಲ್ ನ್ನು ಸಂಗೀತ ವಿದ್ವಾಂಸ ಡಾ| ಶ್ರೀ ವಿದ್ಯಾಭೂಷಣ ಅವರು ನ.4ರಂದು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಕೆ ಶ್ರೀ ರಮಣ ಉಪಾಧ್ಯಾಯ ಹಾಗೂ ಧರ್ಮದರ್ಶಿ ಕೆ ನಿರಂಜನ ಉಪಾಧ್ಯಾಯ ಇವರು ಉಪಸ್ಥಿತರಿದ್ದರು.
ಶ್ರೀ ರಮಣ ಉಪಾಧ್ಯಾಯರು ಮಾತನಾಡಿ, ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸಮಗ್ರ ಮಾಹಿತಿಗಳು ಈ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದು ಭಗವದ್ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಜ್ಞಾಪಿಸಿದರು.