ಯುವಜನ

ಆಟವಾಡುತ್ತಿದ್ದ ಮಕ್ಕಳ ಮೇಲೆ ಬೃಹತ್ ಗಾತ್ರದ ಬಂಡೆ ಬಿದ್ದು ಮೂವರು ಸಾವು 

Views: 139

ರಾಯಚೂರು: ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಅಣ್ಣ-ತಂಗಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಲಿಂಗಸೂಗೂರು ತಾಲೂಕಿನ ಗೌಡುರು ತಾಂಡದಲ್ಲಿ ಇಂದು ಈ ಘಟನೆ ನಡೆಯಿತು. ಮಂಜುನಾಥ ಮಾನಪ್ಪ(9), ವೈಶಾಲಿ ಮಾನಪ್ಪ(7) ಅಣ್ಣ-ತಂಗಿಯಾದರೆ, ಮತ್ತೋರ್ವ ಯುವಕ ರಘು ಸಾವನ್ನಪ್ಪಿದವರು.

ನಡೆದ ಘಟನೆ ಏನು?: ಹೊಲದಲ್ಲಿ ಆಟವಾಡಲು ತೆರಳಿದ ಮಕ್ಕಳ ಮೈಮೇಲೆ ದೊಡ್ಡ ಗಾತ್ರದ ಕಲ್ಲು ಬಿದ್ದಿದೆ. ನೋವು ತಾಳಲಾರದೇ ಮಕ್ಕಳು ಜೋರಾಗಿ ಚೀರಾಡಿದ್ದಾರೆ. ಆದರೆ ಬೃಹತ್ ಗಾತ್ರದ ಕಲ್ಲು ಆಗಿದ್ದರಿಂದ ಅವರಿಗೆ ತಕ್ಷಣವೇ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ರಘು ಎಂಬ ಯುವಕ ಗಾಯಗೊಂಡಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ವಿದ್ಯಾರ್ಥಿಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಪೋಷಕರ ಜೊತೆಗೆ ಜಮೀನಿಗೆ ಬಂದಿದ್ದ ಮಕ್ಕಳು. ಜಮೀನು ಬದಿಯಲ್ಲಿ ಬೃಹತ್ ಬಂಡೆಗಳು ಹಾಕಲಾಗಿತ್ತು. ಇದೇ ಕಲ್ಲು ಬಂಡೆಗಳ ಸುತ್ತ ಆಟವಾಡುತ್ತಿದ್ದ ಮಕ್ಕಳು. ಮಕ್ಕಳು ಆಟವಾಡುವಾಗಲೇ ಕುಸಿದುಬಿದ್ದಿರುವ ಬೃಹತ್ ಬಂಡೆ. ಬಂಡೆಗಳ ಕೆಳಗೆ ಆಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಏಕಾಏಕಿ ಉರುಳಿಬಿದ್ದಿದೆ. ಮಕ್ಕಳ ನರಳಾಟ ಕೇಳಿ ಓಡಿಬಂದಿರುವ ಪೋಷಕರು. ತಕ್ಷಣ ಕಲ್ಲು ಬಂಡೆ ಎತ್ತಿಹಾಕದಷ್ಟು ಭಾರವಾಗಿದ್ದರಿಂದ ಪೋಷಕರು ಮಕ್ಕಳ ನರಳಾಟ ಕೇಳಿ ಅಸಹಾಯಕರಾಗಿದ್ದಾರೆ. ಕಣ್ಮುಂದೆ ಅಟವಾಡುತ್ತಿದ್ದ ದಾರುಣ ಸಾವು ಕಂಡು ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಬಂದು ಬೃಹತ್ ಬಂಡೆ ಎತ್ತಿಹಾಕಿದ್ದಾರೆ

ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Related Articles

Back to top button
error: Content is protected !!