ಅಮೇರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರದ ವೇಳೆ ಗುಂಡಿನ ದಾಳಿ

Views: 150
ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಟ್ರಂಪ್, ಚುನಾವಣೆ ಪ್ರಚಾರ ಮಾಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ.ಟ್ರಂಪ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಯ ಪರಿಣಾಮ ಟ್ರಂಪ್ ಅವರ ಬಲ ಕಿವಿ, ಕೆನ್ನೆ ಮತ್ತು ಬಾಯಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ವೇದಿಕೆಯ ಮೇಲೆ ಓಡಿ ಬಂದ ಅಂಗ ರಕ್ಷಕರು ಟ್ರಂಪ್ ಅವರನ್ನು ಸುತ್ತುವರೆದು ರಕ್ಷಣೆ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ.
ವಿಡಿಯೋದಲ್ಲಿ ಟ್ರಂಪ್ ಕಿವಿಯ ಬಳಿ ರಕ್ತ ಸೋರುತ್ತಿರೋದನ್ನು ಕಾಣಬಹುದು. ನಂತರ ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸುತ್ತಾರೆ. ಈ ಘೋರ ದಾಳಿಯ ಸಂದರ್ಭದಲ್ಲಿ ತಕ್ಷಣದ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಜಾರಿ ಮತ್ತು ಮೊದಲ ಪ್ರತಿಸ್ಪಂದಕರಿಗೆ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ ಎಂದು ಮಾಜಿ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ಟ್ರಂಪ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ಇದಾಗಿದೆ. ಈ ಸಂಬಂಧ ತನಿಖೆ ಶುರುವಾಗಿದೆ.
ಸದ್ಯ ಟ್ರಂಪ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಭಾರೀ ಭದ್ರತೆ ನೀಡಲಾಗಿದೆ. ಜ್ಯೂನಿಯರ್ ಟ್ರಂಪ್ ತಮ್ಮ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ತಿದ್ದಾರೆ. ಟ್ರಂಪ್ ದಾಳಿ ವೇಳೆ ಸುಮಾರು 7 ರಿಂದ 8 ಸುತ್ತು ಗುಂಡಿನ ದಾಳಿಯಾಗಿದೆ.






