ವಿಶ್ವ ಯೋಗ ದಿನಾಚರಣೆ -2025 ದೇಹ,ಬುದ್ಧಿ,ಇಂದ್ರಿಯ ನಿಗ್ರಹಿಸಿ ಮನಸ್ಸನ್ನು ಗೆದ್ದರೆ ಮನೋಬಲ ಪ್ರಾಪ್ತಿ

Views: 122
ಮನಸ್ಸು ತುಂಬಾ ಚಂಚಲ, ಸುತ್ತಲ ಜಗತ್ತಿನ ಬೇಕು ಬೇಡಗಳ ಬಗ್ಗೆ ಅಭಿರುಚಿ ಮತ್ತು ಆಸೆಗೆ ತಕ್ಕಂತೆ ಮನಸ್ಸು ಚಲಿಸುತ್ತದೆ. ಚಂಚಲ ಮನಸ್ಸು ದುಖ:ದಿಂದ ದೂರವಾಗಿ ಒಳ್ಳೆಯ ದೃಢ ನಿರ್ಧಾರ ಮಾಡಿ ಸುಂದರ ಬದುಕು ರೂಪಿಸಲು ಯೋಗಾಭ್ಯಾಸ ಉನ್ನತ ಮಾರ್ಗವಾಗಿದೆ.
ಮನಸ್ಸನ್ನು ಒಂದು ಕಡೆ ಕೇಂದ್ರಿಕರಿಸಿ ದೇಹ, ಮನಸ್ಸು, ಬುದ್ಧಿಯನ್ನು ಒಂದುಗೂಡಿಸುವುದಕ್ಕಾಗಿ ಯೋಗದ ಅಷ್ಟಾಂಗ ಮಾರ್ಗವನ್ನು ಕರಗತ ಮಾಡಿಕೊಂಡು ಹಿಡಿದ ಕೆಲಸವನ್ನು ನೂರಕ್ಕೆ ನೂರರಷ್ಟು ಅವಧಾನಿಸಿ ಪೂರೈಸುವ ಪ್ರಜ್ಞೆ ಮತ್ತು ಕ್ರಿಯೆ ಒಂದೇ ಕೇಂದ್ರದಲ್ಲಿ ಅನ್ವಯಿಸಿದಾಗ ಈ ಕೆಲಸ ನಮಗೆ ಅರಿವಿಲ್ಲದೆ ಆಗಿರಬಹುದು. ಅರಿವಿಲ್ಲದೆ ಆದರೆ ಕರ್ಮಯೋಗ ಅರಿವು ಮಾತ್ರ ಇದ್ದಾಗ ಜ್ಞಾನಿಯಾಗಿ ಕರ್ಮಗಳನ್ನು ಮಾಡಲು ಆರಂಭಿಸುತ್ತಾನೆ
ನಿರಂತರ ಯೋಗ ಅಭ್ಯಾಸದಿಂದ ಶರೀರ, ಮನಸ್ಸು, ಇಂದ್ರಿಯದ ಕಲ್ಮಶಗಳು ದೂರವಾಗಿ ನಿರ್ಮಲವಾದ ಮನಸ್ಸು ಸ್ವಾಧೀನಕ್ಕೆ ಬರುತ್ತದೆ. ಬುದ್ದಿ ಸೂಕ್ಷ್ಮ ರೂಪಗೊಂಡು, ಕಠಿಣ ಮತ್ತು ಸೂಕ್ಷ್ಮ ವಿಷಯಗಳನ್ನು ಶೀಘ್ರವಾಗಿ ಗೃಹಣ ಮಾಡಲು ಸಾದ್ಯವಾಗುದಲ್ಲದೆ ಯೋಗದಿಂದ ಚಿರಂಜೀವಿಯಾಗಿ ಕೆಲಸಮಾಡುತ್ತದೆ. ಯೋಗದ ಅಭ್ಯಾಸ ಅನುಸಂಧಾನ ಮಾಡಿಕೊಂಡಾಗ ಸ್ವಾರ್ಥ, ದುರಾಸೆ, ಅಸೂಯೆ, ಕೋಪ ಎಂಬ ಮನಸ್ಸಿನ ಪೊರೆಯನ್ನು ಕಳಚಿದಾಗ ಶೃದ್ಧೆ, ಭಕ್ತಿ, ನಿಷ್ಠೆ, ಶರಣಾಗತಿ ಅಂತರಂಗದ ಸಿರಿ ಹೆಚ್ಚಿಸಿದಷ್ಟು ಬಹಿರಂಗದಲ್ಲಿ ನಲಿವು ಗೆಲುವು ನಮ್ಮದಾಗಿ, ಸದ್ಭಾವ- ಸದ್ಗುಣಗಳು, ಸದಾಚಾರ, ಸೇವಾ ಮನೋಭಾವನೆಯಿಂದ ಸಮಾಜದ ಅಭಿವೃದ್ಧಿಯಾಗುತ್ತದೆ. ಇಂತಹ ಸಮರ್ಪಣಾ ಮನೋಭಾವನೆಯಿಂದ ಮನಶಾಂತಿ ದೊರೆಯುತ್ತದೆ. ಹೀಗೆ ಅನೀರಿಕ್ಷತವಾಗಿ ಸಿಗಬಹುದಾದುದನ್ನು ಯೋಗ ಎಂದು ಅದನ್ನು ದೀರ್ಘಾವದಿಗೆ ಉಳಿಸಿಕೊಳ್ಳುವುದನ್ನು ಕ್ಷೇಮ ಎಂದು ಹೀಗೆ ದೈಹಿಕ ಮತ್ತು ಮಾನಸಿಕ ಸಮತೋಲನವೇ ಶಾಂತಿ. ಇದುವೇ ನಮಗೆ ‘ಯೋಗಾಯೋಗಾ’ ನಾವು ಒಳ್ಳೆಯದನ್ನು ಪಡೆಯಲು ಕೆಟ್ಟದ್ದನ್ನು ಬಿಟ್ಟು ಯೋಗದ ಮೂಲಕ ನಡೆ ನುಡಿ ಒಂದುಗೂಡಿಸಿ ಎಲ್ಲಾ ಇದ್ದು ಪಡೆಯುದಕ್ಕಿಂತ ಏನೂ ಇಲ್ಲದೆ ಇದ್ದಾಗ ಪಡೆಯುವುದೆ ಸುಖ.
|ಯೋಗ ಕ್ಷೇಮಂ ವಹಾಮ್ಯಾಹಂ| ಎನ್ನುವಂತೆ ದಿನ ನಿತ್ಯೆ ಯೋಗ ಧ್ಯಾನ, ಪ್ರಾಣಾಯಾಮದ ಆತ್ಮಬಲ ವೃದ್ಧಿಸಿಕೊಂಡರೆ ಪರಸ್ಪರ ಸಹಬಾಳ್ವೆಯ ಜೀವನ, ಸುಂದರ ಬದುಕು ನಮ್ಮದಾಗುತ್ತದೆ
ಮಾನವನು ಭೂಮಿಗೆ ಬಂದ ಮೇಲೆ ಬಿಡಿಸಲಾಗದ ದೊಡ್ಡ ಬಂಧವೇ ಮನಸ್ಸು ಅದು ಯಾವಾಗಲೂ ಹಣ,ಸಮಯ, ಶ್ರಮದ ವ್ಯಯದತ್ತ ಹೋಗದಂತೆ ನಿಯಂತ್ರಣ ಸಾಧನ ಧ್ಯಾನ ಮಾರ್ಗ.
|ಮನ ಏವ ಮನುಷ್ಯಾಣ ಕಾರಣಂ| ಎನ್ನುವಂತೆ ಮನುಷ್ಯನ ಪ್ರಗತಿಗೂ ಅವನತಿಗೂ ಮನಸ್ಸೇ ಕಾರಣ ಅದ ನರಕಕ್ಕೆ ಮತ್ತು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ. ಹಿಟ್ಲರ್ ಮನಸ್ಸಿನಿಂದ ಯುದ್ಧ ಆರಂಭಿಸಿ ಇಂಗ್ಲೆಂಡ್ ಯುದ್ಧದಲ್ಲಿ ಕೊನೆಗೊಂಡಿದೆ. ಹಾಗೆಯೇ ದೇಹ, ಬುದ್ಧಿ, ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಗೆದ್ದವ ಜಗತ್ತನ್ನೇ ಗೆದ್ದಂತೆ ಇದಕ್ಕೆಲ್ಲಾ ಮನೋಬಲ ಇದ್ದರೆ ಏನೂ ಬೇಕಾದರೂ ಸಾಧಿಸಬಹುದು ಇದಕ್ಕಿಂತ ಮುಂದೆ ಸಾಗಿದವನು ಸಾಕ್ಷಾತ್ಕಾರಕ್ಕೆ ತಲುಪಿದವ ಎನ್ನುತ್ತೇವೆ.
ಮನಸ್ಸನ್ನು ಗುಲಾಮನಾಗಿಸಲು ಧ್ಯಾನ ಎಂಬ ಅಸ್ತ್ರದಿಂದ ಸಾದ್ಯ ಎಂಬುದನ್ನು ಭಾರತೀಯ ಋಷಿ ಮುನಿಗಳು ಕಂಡು ಕೊಂಡ ಸತ್ಯ,
ನೂರಾರು ವರ್ಷಗಳಿಂದ ವಿಜ್ಞಾನಿಗಳು ಮನಸ್ಸಿನ ಬಗ್ಗೆ ಸಂಶೋಧನೆ ನಡೆಸಿ ನಿರ್ಧಿಷ್ಟವಾದ ಸಿಧ್ದಾಂತಕ್ಕೆ ಬರಲು ಸಾದ್ಯವಾಗಲಿಲ್ಲ ಸಾವಿರಾರು ವರ್ಷಗಳಿಂದ ನಮ್ಮ ಋಷಿ ಮುನಿಗಳು ವಿಶ್ವ ಪರ್ಯಟನೆ ಮಾಡಿ ನಿಜವಾಗಿ ಮನಸ್ಸನ್ನು ಗೆದ್ದಿದ್ದಾರೆ.
ನಾನು ಎಂಬ ಭಾವ ಬಿಟ್ಟ ಮೇಲೆ ನನ್ನದಲ್ಲ ಎಂಬ ಭಾವನೆ ಮೂಡಿಸಿ ಮನಸ್ಸಿನ ಗುಲಾಮನಾಗಲು ಅಹಂಕಾರ ಕಾರಣ ಈ ಭೂಮಿಗೆ ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನೂ ಕೊಂಡೊಯ್ಯುದಿಲ್ಲ ನಾನು ಎಂಬ ಅಹಂ ಬಿಟ್ಟು ದೇವರ ಕೊಡುಗೆ ಎಂಬುದಾಗಿ ಅನುಭವಿಸಬೇಕು.
ನಾವೆಲ್ಲ ಗೇಣಿದಾರ ರೈತನಂತೆ ದುಡಿದು ಪ್ರಕೃತಿ ಕೊಟ್ಟಿದ್ದನ್ನು ತಾನು ಅನುಭವಿಸಿ ಹಂಚಿ ತಿನ್ನಬೇಕು.ಆಗುವುದೆಲ್ಲಾ ಒಳ್ಳೆಯದಕ್ಕೆ ‘ಸೂರ್ಯನಿಂದ ರಾತ್ರಿ ಹಗಲು’ ‘ಭೂಮಿ ಒಲಿದಾಗ ಸ್ವರ್ಗ ಮುನಿದಾಗ ನರಕ’ ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವಾಗ ಆನಂತ ಸತ್ಯದೆಡೆಗೆ ಚಿಂತಿಸುತ್ತಾ ಬಂದಾಗ ಅಹಂನ ಮಕ್ಕಳಾದ ಕಾಮ, ಕೋಧ. ಲೋಭ. ಮೋಹ, ಮದ. ಮತ್ಸರ ನಮ್ಮಿಂದ ನಿಧಾನವಾಗಿ ದೂರವಾಗುತ್ತಾ ದುಖಃ ಕಡಿಮೆಯಾಗಿ ನಗು ನಗುತ್ತಾ ಮನಸ್ಸನ್ನು ಅರಿಯಲು ಮೊದಲ ಮಾರ್ಗವೆಂದರೆ ಧ್ಯಾನ
ಕುದುರೆ ಸವಾರಿ ಮಾಡುವಾಗ ದೈರ್ಯ ಸ್ಥೆರ್ಯದಿಂದ ಎಷ್ಟು ಜಾಗೃತರಾಗುತ್ತೇವೆಯೋ ಹಾಗೆ ಮನಸ್ಸಿನ ಸವಾರಿ ಮಾಡುವಾಗ ಅಷ್ಟೇ ಜಾಗೃತರಾಗಬೇಕು. ಇಲ್ಲದಿದ್ದರೆ ಭ್ರಾಂತರಾಗಿ ಕ್ಷೀಣ ಮನಸ್ಸಿನವರಾಗುತ್ತೇವೆ.
ಧ್ಯಾನ ಮಾಡುವಾಗ ವಜ್ರಾಸನ, ಸಿಧ್ದಾಸನ, ಪದ್ಮಾಸನ, ಅರ್ಧ ಪದ್ಮಾಸನ ಯಾವುದೇ ಆಸನ ಆಗಿರಬಹುದು ಒಂದು ಆಸನದಲ್ಲಿ 1 ಗಂಟೆಗಳ ಕಾಲ ಕುಳಿತುಕೊಳ್ಳಲು ಸಾದ್ಯವಾದರೆ ಅದನ್ನು ಆಸನ ಸಿದ್ಧಿ ಎನ್ನುತ್ತೇವೆ.
ನಿಧಾನವಾಗಿ ಉಸಿರನ್ನು ಮೇಲೆ ಕೆಳಗೆ ಎಳೆದುಕೊಂಡು ಬೆಳಿಗ್ಗೆಯಿಂದ ಈಗಿನವರೆಗೆ ಆಗಿಹೋದ ಘಟನೆಗಳ ಬಗ್ಗೆ ಜ್ಞಾಪಿಸಿ ತಪ್ಪುಗಳನ್ನು ಭಾವಪೂರ್ಣವಾಗಿ ಕ್ಷಮಿಸಿ,ಇತರರಿಂದ ತೊಂದರೆಯಾದಲ್ಲಿ ಮನಸ್ಸಿನಲ್ಲಿಯೇ ಕ್ಷಮಿಸಿ ತುಂಬು ಹೃದಯದಿಂದ ಮುಂದೆ ಸಾಗಿದಾಗ ಧ್ಯಾನದ ಒಳಗಡೆ ಹೋಗುವಾಗ ಉಸಿರಾಟದ ಕಡೆಗೆ ಗಮನಹರಿಸಿ ಉಸಿರನ್ನು ಒಳಗೆ ಎಳೆದುಕೊಳ್ಳುವಾಗ `ಸೋ… ಉಸಿರು ಹೊರಗೆ ಬಿಡುವಾಗ `ಹಂ.. ಧ್ಯಾನದ ಮೊದಲು ಹತ್ತು ಭಾರಿ ಓಂ ಹೇಳಬೇಕು ನಂತರ ಮನಸ್ಸಿನಲ್ಲಿಯೇ 5 ಬಾರಿ ಸೋಹಂ ಹೇಳಿದ ನಂತರ ಕೇವಲ ಶಬ್ದದ ಮೇಲೆ ಗಮನಹರಿಸಿ ಓಡುತ್ತಿರುವ ಮನಸ್ಸಿನ ಮೇಲೆ ನಿಗಾ ವಹಿಸಿ ಮನಸ್ಸು ಕಟ್ಟಕಡೆಗೆ ಓಡುತ್ತಿರುವಾಗ ಸದಾ ನಿನ್ನನ್ನು ಪ್ರೀತಿಸುತ್ತೇನೆ ಎಂದು ತಿಳಿದುಕೊಂಡು ನಂತರ ಖಾಲಿಯಾದ ಜಾಗವೇ ಧ್ಯಾನದ ಆರಂಭ ಪ್ರತಿ ದಿನ 5 ನಿಮಿಷ ಧ್ಯಾನ ಮಾಡಿ ನಂತರ 1-2 ತಿಂಗಳು 20 ನಿಮಿಷ 6 ತಿಂಗಳ ತಂತರ 30 ನಿಮಿಷ ಧ್ಯಾನ ಮಾಡಿ ಮೊದ ಮೊದಲು ಧ್ಯಾನ ಸಾಕು ಎಂದು ಮನಸ್ಸಿನಲ್ಲಿ ಜಗಳವಾಡಿದರೆ ಅದೇ ಮನಸ್ಸು ಸಹಾಯ ಮಾಡಿ ಮುಂದೆ ಹೋಗುತ್ತದೆ. ಧ್ಯಾನದ ಒಳಗೆ ಹೋದಾಗ ಮನಸ್ಸಿನ ಶಾಂತಿ ಸಮಾದಾನದ ನಂತರ ಅಂತರ್ ಯಾತ್ರೆ 1 ವರ್ಷ ಕಳೆದಾಗ ಧ್ಯಾನದ ಅನುಭವ ವಾಗುತ್ತದೆ. ದೇಹ ಸ್ಪರ್ಶರಹಿತ, ಶಕ್ತಿರಹಿತ ಏನೋ ಸಂತೋಷ ಒಳಗೆ ಹೊರಗೆ ಹೊರಗೆ ಹೋದ ಅನುಭವ ಆಗುತ್ತದೆ. ಧ್ಯಾನದ ಒಳಗೆ ಸೇರಿದಾಗ ಮೆದುಳಿನಿಂದ ಇಡೀ ದೇಹವನ್ನು ವ್ಯಾಪಿಸಿದ ಅನುಭವವಾಗುತ್ತದೆ. ಸಾಮಾನ್ಯ ಮನುಷ್ಯನಲ್ಲಿ ನಿಮಿಷಕ್ಕೆ 23 ಅಲೆಗಳು ಹರಿದಾಡುತದೆ. ದೇಹದಲ್ಲಿ ಅಲೆಗಳು ನಿಮಿಷಕ್ಕೆ 23 ರಿಂದ 13 ಕ್ಕೆ ಇಳಿದಾಗ ಶಿಸ್ತುಬಧ್ಧವಾಗಿ ಇದನ್ನು ‘ಆಲ್ಫಾ’ಅಲೆಗಳು ಅನ್ನುತ್ತೇವೆ.
ಇನ್ನೂ ಆಳಕ್ಕೆ ಇಳಿದಾಗ 13 ರಿಂದ 7 ಕ್ಕೆ ಇಳಿಯುದನ್ನು ‘ಥೀಟಾ’ ಅಲೆಗಳು ಎಂದೂ ಕ್ರಮೇಣ 1 ತಾಸಿನ ಧ್ಯಾನದಲ್ಲಿ ಆಸಕ್ತರಾದ ನಿದ್ದೆಯೂ ಅಲ್ಲ ಜಾಗೃತಿಯೂ ಅಲ್ಲದ ಸ್ಥಿತಿಗೆ ಬರುತ್ತದೆ. ನಂತರ ಈ ಅಲೆಗಳು 7 ರಿಂದ 4,3,2,1 ಕ್ಕೆ ಬಂದಾಗ ಇದನ್ನು ‘ಡೆಲ್ಟಾ ‘ಅಲೆಗಳು ಇದನ್ನೆ ಸಮಾಧಿ ಸ್ಥಿತಿ ಆಗ ನಿಜವಾದ ಉತ್ಸಾಹ, ಆನಂದ ಪ್ರಾಪ್ತಿಯಾಗುತ್ತದೆ.
– ಸುಧಾಕರ ವಕ್ವಾಡಿ ‘ಕನ್ನಡ ಕರಾವಳಿ’