ವರನೊಬ್ಬ ಹಾರವನ್ನು ವಧುವಿನ ಕೊರಳಿಗೆ ಬದಲು ಬೆರೋಬ್ಸರಿಗೆ? ಮದುಮಗಳು ಮದುವೆ ನಿರಾಕರಣೆ!

Views: 197
ಕನ್ನಡ ಕರಾವಳಿ ಸುದ್ದಿ: ವರನೊಬ್ಬ ಮದುವೆಯ ಹಾರವನ್ನು ವಧುವಿನ ಕೊರಳಿಗೆ ಹಾಕುವ ಬದಲು ಆತನ ಸ್ನೇಹಿತನ ಕೊರಳಿಗೆ ಹಾಕಿದ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
ವರನು ಕುಡಿದು ಮತ್ತಿನಲ್ಲಿ ತೂರಾಡುವುದನ್ನು ನೋಡಿದ ವಧು ಕೋಪಗೊಂಡು, ಅವನನ್ನು ಮದುವೆಯಾಗಲು ಆಕೆ ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಯನ್ನು ರದ್ದುಗೊಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವರನ ಕಡೆಯವರ ಮೇಲೆ ಪ್ರಕರಣ ದಾಖಲಾಗಿದೆ. ಹಾಗಾಗಿ ವರನ ಕಡೆಯವರ ಬಳಿ ಪೊಲೀಸರು ಮಾತುಕತೆ ನಡೆಸಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶನಿವಾರ (ಫೆಬ್ರವರಿ 22) ರಾತ್ರಿ ಮದುವೆ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ. ವರಮಾಲೆ ಸಂದರ್ಭದಲ್ಲಿ ವಧು ವರನ ಕುತ್ತಿಗೆಗೆ ಹಾರವನ್ನು ಹಾಕಿದ್ದಾಳೆ. ಆದರೆ, ಕುಡಿದ ಅಮಲಿನಲ್ಲಿ, ವರನು ತಪ್ಪಾಗಿ ತನ್ನ ಸ್ನೇಹಿತನ ಕುತ್ತಿಗೆಗೆ ಹಾರವನ್ನು ಹಾಕಿದ್ದಾನೆ. ಇದರಿಂದ ಕೋಪಗೊಂಡ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
ವಧುವಿನ ಕುಟುಂಬ ಸದಸ್ಯರು ಮದುವೆಗೆ ಅವಳನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೆ ಆಕೆ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಬಗ್ಗೆ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ವರ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾರ್ವಜನಿಕ ಅವಮಾನದ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.