ಸಾಮಾಜಿಕ

ಮೂರು ದಿನ ಮೊದಲ ಹೆಂಡತಿ, ಮೂರು ದಿನ ಎರಡನೇ ಹೆಂಡತಿ ಜೊತೆಗೆ, ಒಂದು ದಿನ ಸ್ವತಂತ್ರ:ಏನಿದು ವಿಚಿತ್ರ ಒಪ್ಪಂದ?

Views: 391

ಕನ್ನಡ ಕರಾವಳಿ ಸುದ್ದಿ: ಎರಡು ಮದುವೆ ಮಾಡಿಕೊಂಡ ವ್ಯಕ್ತಿಗೆ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನ ನಿರ್ಧಾರದ ಪ್ರಕಾರ, ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ ಎರಡನೇ ಹೆಂಡತಿಯೊಂದಿಗೆ ಕಳೆಯಬೇಕು.

ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ. ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಲ್ಲವಾದ್ರೆ ಒಬ್ಬನೇ ಕಳೆಯಬಹುದು. ಹೀಗೆ ಒಂದು ವಿಚಿತ್ರ ಒಪ್ಪಂದ ರಾಜಿ ಸಂದಾನದ ಮೂಲಕ ಮಾಡಲಾಗಿದೆ.‌

ಬಿಹಾರ್‌ನ ಪೂರ್ಣಿಯಾ ಜಿಲ್ಲೆಯ ಸಂಸಾರದಲ್ಲಿ ಒಂದು ವಿಚಿತ್ರ ಒಪ್ಪಂದ ಆಗಿದೆ. ಒಬ್ಬ ಪುರುಷ ತನ್ನ ಎರಡು ಹೆಂಡತಿಯರೊಂದಿಗೆ ಸಮಯವನ್ನು ಹಂಚಿಕೊಳ್ಳಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

ಪೂರ್ಣಿಯಾದ ರೂಪೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಏಳು ವರ್ಷಗಳ ಹಿಂದೆ ಈ ವ್ಯಕ್ತಿ ಎರಡನೇ ಮದುವೆಯಾಗಿದ್ದನು. ಆದರೆ ಅವನ ಮೊದಲ ಹೆಂಡತಿಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ. ಎರಡನೇ ಮದುವೆ ಬಗ್ಗೆ ಮೊದಲ ಹೆಂಡತಿ ಆಕ್ಷೇಪಿಸಿದ್ದರಿಂದ ಮನೆಯಲ್ಲಿ ನಿರಂತರ ಜಗಳಗಳು ಶುರುವಾದವು.

ಪರಿಸ್ಥಿತಿ ಹದಗೆಟ್ಟು ಎರಡನೇ ಹೆಂಡತಿಯೊಂದಿಗೆ ವ್ಯಕ್ತಿ ವಾಸಿಸಲು ಪ್ರಾರಂಭಿಸಿದ್ದರು. ತನ್ನ ಪತಿ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ಮೊದಲ ಹೆಂಡತಿ ಆರೋಪಿಸಿದ್ದಳು. ಪ್ರಕರಣ ಸ್ಟೇಷನ್ ಮೆಟ್ಟಿಲು ಏರಿತ್ತು. ಸ್ಟೇಷನ್ ನಲ್ಲಿ ರಾಜಿ ಸಂಧಾನದ ಬಳಿಕ ಇಬ್ಬರು ಹೆಂಡ್ತಿಯರ ಜತೆ ಸಮನಾಗಿ ಇರುವಂತೆ ಸೂಚನೆ ನೀಡಲಾಗಿದೆ.

Related Articles

Back to top button