ಆರೋಗ್ಯ

ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಸಿಗುತ್ತೆ ರಕ್ತ ಪರೀಕ್ಷೆ ವರದಿ!..ದೇಶದಲ್ಲೇ ಮೊದಲ ಬಾರಿಗೆ ಅನಾವರಣ

Views: 48

ಕನ್ನಡ ಕರಾವಳಿ ಸುದ್ದಿ: ಹೈದರಾಬಾದ್,ಸೂಜಿ ಚುಚ್ಚುವ ಅಗತ್ಯವಿಲ್ಲದೇ ರಕ್ತ ಪರೀಕ್ಷೆ ಮಾಡುವ ಎಐ ಆಧಾರಿತ ಡೈಗ್ನೊಸ್ಟಿಕ್ ಫೋಟೋ ಪ್ಲೆಥಿಸ್ಮೋಗ್ರಫಿ (ಪಿಪಿಜಿ) ಉಪಕರಣವನ್ನು ದೇಶದಲ್ಲೇ ಮೊದಲ ಬಾರಿಗೆ ಅನಾವರಣ ಮಾಡಲಾಗಿದೆ ನಿಲೋಫರ್ ಸರ್ಕಾರಿ ಆಸ್ಪತ್ರೆ ತಿಳಿಸಿದೆ.

ಸೋಮವಾರ ವೈದ್ಯಾಧಿಕಾರಿಗಳಾದ ಅಧಿಕಾರಿಗಳಾದ ಡಾ. ಲಾಲು ಪ್ರಸಾದ್ ರಾಥೋಡ್, ಡಾ. ವಿಜಯಕುಮಾರ್ ಮತ್ತು ಡಾ. ಮಾಧವಿ ಅವರೊಂದಿಗೆ ನಿಲೋಫರ್ ಆಸ್ಪತ್ರೆಯ ಅಧೀಕ್ಷಕ ಡಾ. ರವಿ ಕುಮಾರ್ ಅವರು ಈ ಸಾಧನವನ್ನು ಲೋಕಾರ್ಪಣೆ ಮಾಡಿದರು.

ಅಮೃತ ಸ್ವಾಸ್ಥ್ಯ ಭಾರತ ಕಾರ್ಯಕ್ರಮದಡಿಯಲ್ಲಿ ಪರಿಚಯಿಸಲಾದ ಉಪಕರಣ, ಫೋಟೋ ಪ್ಲೆಥಿಸ್ಮೋಗ್ರಫಿ (ಪಿಪಿಜಿ) ಅನ್ನು ಬಳಸಿಕೊಂಡು ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ತ್ವರಿತವಾಗಿ ಪರೀಕ್ಷೆ ನಡೆಸಿ ವರದಿ ನೀಡುತ್ತದೆ.

ಆಸ್ಪತ್ರೆಯ ವಕ್ತಾರರ ಪ್ರಕಾರ, ಎಸ್ಇಡಿ ಸೆಲ್ಫೀ ರಿಂಗ್ ಲೈಟ್‌ನೊಂದಿಗೆ ಇರುವ ಎಲ್ಇಡಿ ಟ್ರೈಪಾಡ್ನಲ್ಲಿ ಅಳವಡಿಸಿದ ಪಿಪಿಜಿ ಸಾಧನದೊಂದಿಗೆ ಸಂಪರ್ಕಿತ ಮೊಬೈಲ್ ಸ್ಕ್ರೀನ್‌ ಕಡೆಗೆ 30 ರಿಂದ 40 ಸೆಕೆಂಡುಗಳು ನೋಡಿದರೆ ಸಾಕು, ರಕ್ತದೊತ್ತಡ (ಬಿಪಿ), ಆಮ್ಲಜನಕ ಶುದ್ಧತೆ (ಎಸ್‌ಪಿಒ 2), ಹೃದಯ ಬಡಿತ, ಉಸಿರಾಟ (ಶ್ವಾಸಕ್ರಿಯೆ), ಹೆಚ್‌ಆರ್‌ವಿ, ಒತ್ತಡ ಮಟ್ಟ, ಹಿಮೋಗ್ಲೋಬಿನ್, ನಾಡಿ ಬಡಿತ, ಸಿಂಪಥಿಟಿಕ್, ಪ್ಯಾರಾಸಿಂಪಥಿಟಿಕ್‌ ಆಕ್ಟಿವಿಟಿ ಸೇರಿದಂತೆ ಮುಂದಾತ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಅಧೀಕ್ಷಕ ಡಾ. ರವಿ ಕುಮಾರ್ ಮಾತನಾಡಿ, “ಮುಂದಿನ ಎರಡು ತಿಂಗಳಲ್ಲಿ ಸಾವಿರ ಮಕ್ಕಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು. ಸಂಗ್ರಹಿಸಿದ ಡೇಟಾವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಫಲಿತಾಂಶಗಳು ಆಶಾದಾಯಕವಾಗಿದ್ದರೆ, ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ಇತರ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಲು ನಾವು ಶಿಫಾರಸು ಮಾಡಲು ಯೋಜಿಸಿದ್ದೇವೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕಿ ಕರುಣಾ ಗೋಪಾಲ್ ಮಾತನಾಡಿ, ನಿಲೋಫರ್ ಆಸ್ಪತ್ರೆ ಅಭಿವೃದ್ಧಿಪಡಿಸಿದ ಉಪಕರಣದಿಂದ ವಿಶೇಷವಾಗಿ ನವಜಾತ ಶಿಶುಗಳು ಮತ್ತು ಬಾಣಂತಿಯರಿಗೆ ಪ್ರಯೋಜನವಾಗುತ್ತದೆ ಎಂದರು.

ಸುಷೇಣಾ ಹೆಲ್ತ್ ಫೌಂಡೇಶನ್‌ನ ಉಸ್ತುವಾರಿ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸದಸ್ಯ ಪ್ರೊ. ಡಾ. ಸಂತೋಷ್ ಕುಮಾರ್ ಕ್ರಾಲೇಟಿ, ಫೌಂಡೇಶನ್ ಫಾರ್ ಫ್ಯೂಚರಿಸ್ಟಿಕ್ ಸಿಟೀಸ್‌ನ ಅಧ್ಯಕ್ಷೆ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕಿ ಕರುಣಾ ಗೋಪಾಲ್ ಹಾಗೂ ಕ್ವಿಕ್ ವೈಟಲ್ಸ್‌ನ ಸಂಸ್ಥಾಪಕ ಹರೀಶ್ ಬಿಸಮ್ ಈ ವೇಳೆ ಉಪಸ್ಥಿತರಿದ್ದರು.

Related Articles

Back to top button