ಬೆಂಗಳೂರು:ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ.. ..!?

Views: 27
ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿನ ಶಾಲೆಗಳನ್ನೇ ಟಾರ್ಗೆಟ್ ಮಾಡಿದ ಉದಾಹರಣೆಗಳು ಇವೆ. ಹಾಗೆಯೇ ಇದೀಗ ದುಷ್ಕರ್ಮಿಗಳು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ಟಾರ್ಗೆಟ್ ಮಾಡಿ ಬಾಂಬ್ ಬೆದರಿಕೆ ಮೇಲ್ ಕಳಿಹಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಗರದ ಕಸ್ತೂರಬಾ ರಸ್ತೆಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಪ್ರತಿ ದಿನ ವಿದ್ಯಾಥಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಇಂದು (ಜನವರಿ 05) ಬೆಳಗ್ಗೆ 9 ಗಂಟೆಗೆ ಮ್ಯೂಸಿಯಂ ಬಾಗಿಲು ತೆರೆದು ಅಧಿಕಾರಿಗಳು ಎಂದಿನಂತೆ ಇ-ಮೇಲ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಟ್ಟಿರುವುದಾಗಿ ಉಲ್ಲೇಖ ಆಗಿತ್ತು. ಇದರಿಂದ ಮ್ಯೂಸಿಯಂ ಆವರಣದಲ್ಲಿ ಭಯದ ಭೀತಿ ಆವರಿಸಿತ್ತು.
ಮ್ಯೂಸಿಯಂ ಒಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ. ಅದನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ಅದು ಬೆಳಗ್ಗೆ ಸ್ಫೋಟ ಆಗಲಿದೆ. ಮ್ಯೂಸಿಯಂನಲ್ಲಿರುವ ಅಷ್ಟು ಜನ ಸಾವನ್ನಪ್ಪಲ್ಲಿದ್ದಾರೆ. ನಾವು errorizers 111 ಎಂಬ ಹೆಸರು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಬಳಿಕ ಅಲ್ಲಿದ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳದ ತಂಡ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಕಂಡು ಬಂದಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದ್ದು, ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿ ಅಡ್ರಾಸ್ ಹುಡುಕಾಟ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.