ಸಾಂಸ್ಕೃತಿಕ

ಬಾಲಿವುಡ್​ನ ಜನಪ್ರಿಯ ನಟಿ ಜಾಸ್ಮಿನ್ ಭಾಸಿನ್ ಆಸ್ಪತ್ರೆಗೆ ದಾಖಲು!

Views: 30

ಮುಂಬೈ: ಬಾಲಿವುಡ್​ನ ಜನಪ್ರಿಯ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಜಾಸ್ಮಿನ್ ಭಾಸಿನ್ ತೀವ್ರ ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ದಿಲ್ ತೋ ಹ್ಯಾಪಿ ಹೈ ಜಿ’ ಖ್ಯಾತಿಯ ನಟಿ ತೀವ್ರ ಅನಾರೋಗ್ಯದ ಕಾರಣ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಫೋಟೋವೊಂದನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಿ ತಿಳಿಸಿದ್ದಾರೆ.

ಜಾಸ್ಮಿನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಖವನ್ನು ಬಹಿರಂಗಪಡಿಸದ ನಟಿ, ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮುಂಚಿನಿಂದಲೂ ಜಾಸ್ಮಿನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ತಮ್ಮ ಅಭಿಮಾನಿಗಳೊಂದಿಗೆ ಹೊಸ ಫೋಟೋ, ವಿಡಿಯೋ ಸೇರಿದಂತೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

2011 ರಲ್ಲಿ ತಮಿಳಿನ ‘ವಾನಂ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ, ಹಿಂದಿ ಭಾಷೆಯ ‘ದೈನಿಕ ಸೋಪ್ ತಶನ್-ಎ-ಇಷ್ಕ್‌’ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಸ್ಮಿನ್ ‘ದಿಲ್ ಸೆ ದಿಲ್ ತಕ್’, ‘ದಿಲ್ ತೋ ಹ್ಯಾಪಿ ಹೈ ಜಿ’, ‘ನಾಗಿನ್ 4’, ‘ಫನ್‌ಹಿತ್ ಮೇ ಜಾರಿ’ ಸೇರಿದಂತೆ ಇತರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ,

Related Articles

Back to top button