ಬಾರಕೂರು :ಎಸ್ಎಸ್ಎಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

Views: 2
ಬಾರಕೂರು: ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆದ 209ನೇ ಮಾಸಿಕ ಸತ್ಯನಾರಾಯಣ ಪೂಜೆ ಮತ್ತು ನಂತರ ನಡೆದ ಮಾಸಿಕ ಸಭೆಯಲ್ಲಿ ಕೂಡುಕಟ್ಟಿಗೆ ಸೇರಿದ ಎಸ್ ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ದೇವಳದ ವತಿಯಿಂದ ಅಭಿನಂದನೆ ಸಲ್ಲಿಸಿ, ಗೌರವಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರ ಡಾ. ಸಿ.ಜಯರಾಮ ಶೆಟ್ಟಿಗಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಬೆಳೆಸಬೇಕು. ಭವಿಷ್ಯದಲ್ಲಿಯೂ ಸರಿಯಾದ ಮಾರ್ಗ ಅನುಸರಿಸುತ್ತಾರೆ. ಸಮಾಜವನ್ನು ಮಾತ್ರವಲ್ಲದೆ ಪಾಲಕರು, ಗುರು, ಬಂದು ಬಾಂಧವರನ್ನು ಹಾಗೂ ಸಮಾಜವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ನಿಿಟ್ಟಿನಲ್ಲಿ ದೇವಸ್ಥಾನ ಸಹ ಸಂಸ್ಕಾರ ಕೊಡುವ ಪವಿತ್ರ ಸ್ಥಳವಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೆಚ್ಎ ಗೋಪಾಲ್ ಅವರು ಮಾತನಾಡಿ, ಧಾರ್ಮಿಕತೆಯ ಕೇಂದ್ರವಾಗಿರುವ ದೇವಾಲಯಗಳು ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪ್ರತಿಬಿಂಭಿಸಿ ತಮ್ಮ ಬದುಕನ್ನು ಪರಿಪೂರ್ಣದೆಡೆಗೆ ಕೊಂಡೊಯ್ಯುತ್ತದೆ ಎಂದರು.
ಉತ್ತಮ ಸಾಧನೆಗೈದ ಪಿಯುಸಿ ವಿದ್ಯಾರ್ಥಿಗಳಾದ ಶಿಶಿರ, ಶರಧಿ, ಸಾಕ್ಷಿ, ಪಂಚಮಿ, ಮೇಘ ಶ್ಯಾಮ, ಸ್ವಸ್ತಿಕ್, ಡಯಾನ, ಪವನ ,ತರುಣ್, ಸಾತ್ವಿಕ್, ಶ್ರೇಯಸ್, ಪ್ರಜ್ವಲ್, ಉಜ್ವಲ್, ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಶ್ರಾವ್ಯ, ದೀಕ್ಷಿತಾ, ಪ್ರಜ್ವಲ್, ಅಂಕಿತ ,ಸುಲಕ್ಷ, ಲೇಖನ, ರವೀಶ್, ಅವರನ್ನು ದೇವಾಲಯದ ವತಿಯಿಂದ ಅನುಗ್ರಹ ಪ್ರಸಾದ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್, ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಆಶಾವಿಠಲ ಶೆಟ್ಟಿಗಾರ್, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಾಲಯದ ಸಹ ಮೊಕ್ತೇಸರರು, ಅಭಿವೃದ್ಧಿ ಸಮಿತಿಯ ಸದಸ್ಯರು, ಮಹಿಳಾ ವೇದಿಕೆ, ಹಾಗೂ ಶ್ರೀ ಬ್ರಹ್ಮಲಿಂಗವೀರಭದ್ರ ಶೆಟ್ಟಿಗಾರ /ಪದ್ಮಶಾಲಿ ಸಮಾಜ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳನ್ನು ಗೌರವಿಸಿ, ಅಭಿನಂದಿಸಲಾಯಿತು.