ಸಾಮಾಜಿಕ

ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮಗಳನ್ನು ಹೊಡೆದು ಕೊಂದ ಅಪ್ಪ 

Views: 300

ಕನ್ನಡ ಕರಾವಳಿ ಸುದ್ದಿ: ಮಗಳು ನೀಟ್ ಮಾಕ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಳು ಅನ್ನೋ ಕಾರಣಕ್ಕೆ ತಂದೆಯೊಬ್ಬ ಹೊಡೆದು ಜೀವ ತೆಗೆದಿದ್ದಾನೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲ್ಕರಂಜಿ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಸಾಧನಾ ಭೋಸಲೆ (17) ಅಪ್ಪನ ಹಲ್ಲೆಗೆ ಜೀವಬಿಟ್ಟ ಮಗಳು. ಧೊಂಡಿರಮ್ ಭೋಸಲೆ (45) ಆರೋಪಿ. 12ನೇ ತರಗತಿ ಪಾಸ್ ಆಗಿದ್ದ ಸಾಧನಾ, ನೀಟ್ ಎಕ್ಸಾಂ ಬರೆದಿದ್ದಳು. ಆದರೆ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಳು. ಇದಕ್ಕೆ ಕೋಪಿಸಿಕೊಂಡು ಮಾಡಬಾರದ ಕೆಲಸ ಮಾಡಿದ್ದಾನೆ. ಇನ್ನು ಈ ಬಾಲಕಿ 10ನೇ ತರಗತಿ ಪರೀಕ್ಷೆಯಲ್ಲಿ 92.60 ಅಂಕ ಗಳಿಸಿದ್ದಳು.

ಕಡಿಮೆ ಅಂಕ ಗಳಿಸಿದ್ಕೆ ಮಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಗಳ ಮೇಲೆ ಕೋಪಿಸಿಕೊಂಡ ತಂದೆ ತಾಳ್ಮೆ ಕಳೆದುಕೊಂಡಿದ್ದಾನೆ. ಗ್ರ್ಯಾಂಡರ್ನ ಮರದ ಹಿಡಿಕೆ ಹಿಡಿದು ಮಗಳ ತಲೆಗೆ ಬಾರಿಸಿದ್ದಾನೆ. ಹೊಡೆಯುವ ವೇಳೆ ಹೆಂಡತಿ ಮತ್ತು ಮಗ ಕೂಡ ಅಲ್ಲೇ ಇದ್ದರು.

ಅಪ್ಪನ ಹಲ್ಲೆಗೆ ಗಂಭೀರವಾದ ಮಗಳು ನೆಲಕ್ಕೆ ಕುಸಿದು ಬಿದ್ದಿದ್ದಳು. ನಂತರ ಆಕೆಯನ್ನು ಸಾಂಗ್ಲಿಯದ ಉಶ್ಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ದುರಾದೃಷ್ಟವಶಾತ್ ಆಕೆ ಉಸಿರು ನಿಲ್ಲಿಸಿದ್ದಾಳೆ. ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿನಯ್ ಬಹೀರ್ ನೀಡಿದ ಮಾಹಿತಿ ಪ್ರಕಾರ, ಬಾಲಕಿಯನ್ನು ಸಾಂಗ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಜೀವ ಕಳೆದುಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಆಕೆಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎಂದಿದ್ದಾರೆ.

ಈ ಸಂಬಂಧ ವಿದ್ಯಾರ್ಥಿನಿಯ ತಾಯಿ ಜೂನ್ 22 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪರೀಕ್ಷೆಯಲ್ಲಿ ಮಗಳು ಕಡಿಮೆ ಅಂಕ ಪಡೆದಿದ್ದಕ್ಕೆ ಪತಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ನಾನು ಆಸ್ಪತ್ರೆಗೆ ಕರೆದುಕೊಂಡು ಬಂದೆ ಅಂತಾ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಆರೋಪಿ ತಂದೆಯನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Related Articles

Back to top button
error: Content is protected !!