ಶಿಕ್ಷಣ

ಗುರುಕುಲ ಸಮೂಹ ವಿದ್ಯಾ ಸಂಸ್ಥೆ – ಅತ್ಯುತ್ತಮ ಶಿಕ್ಷಣಕ್ಕೆ ಭರವಸೆಯ ತಾಣ.. 

Views: 10

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ವಕ್ವಾಡಿಯ ಗ್ರಾಮೀಣ ಪರಿಸರದಲ್ಲಿ ಗುರುಕುಲ ವಿದ್ಯಾಸಂಸ್ಥೆಯು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಆಶ್ರಯದಲ್ಲಿ ಕಳೆದ 20 ವರ್ಷಗಳಿಂದ ನಾಡಿಗೆ ಹೆಮ್ಮೆ ಎನ್ನುವಂತೆ ವಿಶಿಷ್ಟ ಮಾದರಿಯಲ್ಲಿ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯದ ವಿವಿಧ ಕಡೆಯಿಂದ ಒಟ್ಟು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆಧುನಿಕ ಕಾಲಕ್ಕೆ ಬೇಕಾದ ಕೌಶಲ್ಯದ ಶಿಕ್ಷಣದೊಂದಿಗೆ ಪ್ರಕೃತಿಯ ಹಸಿರು ತಪ್ಪಲಿನ ನಡುವೆ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಕಾರ ಭರಿತವಾದ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಗುರುಕುಲ ಪಬ್ಲಿಕ್ ಸ್ಕೂಲ್

ಸಿಬಿಎಸ್ಇ ಪಠ್ಯಕ್ರಮದ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕದಿಂದ 10 ನೇ ತರಗತಿ ತನಕ ನಾಲ್ಕು ವಿಭಾಗಗಳನ್ನು ಹೊಂದಿದೆ. ಕಿಂಡರ್ ಗಾರ್ಟನ್, 1 ರಿಂದ 4ನೇ ತರಗತಿವರೆಗಿನ ಜೂನಿಯರ್ ಗ್ರೇಡ್, 5 ರಿಂದ 7ನೇ ತರಗತಿವರೆಗಿನ ಮಿಡ್ಲ್ ಗ್ರೇಡ್, 8 ರಿಂದ 10ನೇ ತರಗತಿವರೆಗಿನ ಸೀನಿಯರ್ ಗ್ರೇಡ್ ವಿಭಾಗವಿದೆ. 6 ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಫೌಂಡೇಶನ್ ತರಗತಿ ನಡೆಸಲಾಗುತ್ತಿದೆ. ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸತತ 16 ವರ್ಷಗಳಿಂದ 100% ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ದಾಖಲೆ ಇದೆ. ಅಲ್ಲದೆ Olympaid ಪರೀಕ್ಷೆ ಮೂಲಕ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.

ಗುರುಕುಲ ಪದವಿ ಪೂರ್ವ ಕಾಲೇಜು

ಸ್ಪರ್ಧಾತ್ಮಕ ಬದುಕಿಗೆ ಪೂರಕವಾದ ಸಮರ್ಥ ಶಿಕ್ಷಣವನ್ನು ಗುರುಕುಲ ಪದವಿ ಪೂರ್ವ ಕಾಲೇಜು ಕಳೆದ 15 ವರ್ಷಗಳಿಂದ 100% ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯ ಮೂಲಕ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಸಿಎ ಕಲಿಯುವ ತಮ್ಮ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಗುರುಕುಲ ಪದವಿ ಪೂರ್ವ ಕಾಲೇಜು KCET, NEET, JEE, NDA, CA Foundation ಪರೀಕ್ಷೆಗಳಿಗೆ ಹಲವು ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದೆ. ದೇಶ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಹಿರಿಮೆ ಈ ವಿದ್ಯಾ ಸಂಸ್ಥೆಗೆ ಇದೆ.

ಪಿ.ಯು ವಿಭಾಗದ ವಿಷಯಗಳು 

ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿಎಸ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಬಿಎಎಸ್ಇ ಮತ್ತು ಸಿಎ, ಸಿಎಸ್ ಫೌಂಡೇಶನ್ ಕೋರ್ಸ್ ಗಳು ಇವೆ.

ಅನುಭವಿ ಬೋಧಕರು 

25 ವರ್ಷಗಳಿಗಿಂತ ಅಧಿಕ ಬೋಧನ ಅನುಭವವನ್ನು ಹೊಂದಿದ ಅನುಭವಿ ಶಿಕ್ಷಕ ವೃಂದವನ್ನು ವಿದ್ಯಾಸಂಸ್ಥೆಯು ಹೊಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿ ಮತ್ತು ತಯಾರಿ ನಡೆಸಲಾಗುತ್ತಿದೆ. 

ವಿಶೇಷ ಮತ್ತು ವಿಶಿಷ್ಟ ಸಹಪಠ್ಯ ಚಟುವಟಿಕೆಗಳಿಗೆ ಅಗ್ರಸ್ಥಾನ

ಶೈಕ್ಷಣಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ವಿದ್ಯಾಸಂಸ್ಥೆಯು ಅಗ್ರಸ್ಥಾನವನ್ನು ಕಾಯ್ದುಕೊಂಡು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೊಂದಿದೆ. ಗುರುಕುಲವೆಂದರೆ ಪ್ರಕೃತಿಯ ಮಡಿನಲ್ಲಿ ಮೈದಳೆದ ಸುಂದರ ವಿದ್ಯಾ ಸಂಸ್ಥೆ. ಹಸಿರ ನಡುವೆ ಪಶುಪಕ್ಷಿಗಳ ಸಹಚರ್ಯದಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣವಿದ್ದು, ಯೋಗ, ಸಂಗೀತ, ಭರತನಾಟ್ಯ, ತಬಲ, ಸ್ಕೇಟಿಂಗ್, ಕರಾಟೆ, ಯಕ್ಷಗಾನ, ರಂಗತರಬೇತಿ ಮತ್ತು ಭತ್ತದ ನಾಟಿ, ಗುರುಕುಲ ಕಾರ್ನಿವಾಲ್, ಬೇಸಿಗೆ ಶಿಬಿರದಂತಹ ವಿನೂತನ ಚಟುವಟಿಕೆಗಳ ತರಬೇತಿ ವಿದ್ಯಾರ್ಥಿಗಳಿಗೆ ದಕ್ಕುತ್ತಿದೆ.

ವಿದ್ಯಾರ್ಥಿಗಳ ಕನಸನ್ನು ಪೋಷಿಸಿದ ಹೆಗ್ಗುರುತು

“ಶಿಕ್ಷಣವೆಂದರೆ ಮನುಷ್ಯನಲ್ಲಿರುವ ಪರಿಪೂರ್ಣವಾದ ವಿಭಕ್ತಿ” ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ಈ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರು ಸ್ಥಾಪಿಸಿದ ವಿದ್ಯಾ ಮಂದಿರವು ಇಂದು ಭವ್ಯವಾಗಿ ಬೆಳೆದು ನಿಂತಿದೆ. ಗುರುಕುಲದ ಶೈಕ್ಷಣಿಕ ಕಂಪನ್ನು ಆಧುನಿಕ ಕಾಲಕ್ಕೆ ಶಿಕ್ಷಣ ನೀಡುವ ಮಾದರಿ ವಿದ್ಯಾ ಸಂಸ್ಥೆಯಾಗಿ ಕರಾವಳಿಯ ಗ್ರಾಮೀಣ ಭಾಗವಾದ ಕೋಟೇಶ್ವರದ ವಕ್ವಾಡಿಯಲ್ಲಿ ತಲೆಯೆತ್ತಿ ನಿಂತಿದೆ.

Related Articles

Back to top button
error: Content is protected !!