ಜನಮನ

ಲಿವ್‌-ಇನ್‌ ಸಂಬಂಧದಲ್ಲಿದ್ದು ಮಗುವಾದರೆ, ಅದು ಅತ್ಯಾಚಾರ ಎನ್ನಲಾಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು 

Views: 56

ಕನ್ನಡ ಕರಾವಳಿ ಸುದ್ದಿ: ಸುದೀರ್ಘ ಕಾಲ ಲಿವ್-ಇನ್ ಸಂಬಂಧದಲ್ಲಿದ್ದು, ಮಗು ಪಡೆದ ನಂತರ ಪುರುಷ ಸಂಗಾತಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸುವ ಪ್ರವೃತ್ತಿ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

‘ಮದುವೆಯ ಬಂಧ’ ಇಲ್ಲದ ಲಿವ್ ಇನ್ ಸಂಬಂಧದಿಂದ ಹೊರ ಬರುವುದು ಅಪರಾಧ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ಪೀಠ ಸ್ಪಷ್ಟವಾಗಿ ಹೇಳಿದೆ. ಮದುವೆ ಆಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಲಿವ್ ಇನ್ ಸಂಗಾತಿ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಇದು ಲಿವ್-ಇನ್ ಸಂಬಂಧವಾಗಿದೆ. ಮಹಿಳೆ ಆ ವ್ಯಕ್ತಿಯಿಂದಲೇ ಒಂದು ಮಗುವನ್ನು ಹೊಂದಿದ್ದಾಳೆ. ಮಗು ಜನಿಸಿದ ನಂತರ ಅತ್ಯಾಚಾರ ಆರೋಪ ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಮುಂದಿಟ್ಟಿದೆ. ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ, ಅಂತಹ ಸಂಬಂಧಗಳಲ್ಲಿ ಕೆಲವು ಅಂತರ್ಗತ ಅಪಾಯಗಳು ಇರುತ್ತವೆ ಎಂಬುದನ್ನೂ ಗಮನಿಸಿದ ಪೀಠ, ಒಪ್ಪಂದ ಅಥವಾ ಒಮ್ಮತದ ಸಂಬಂಧದಲ್ಲಿ ಅತ್ಯಾಚಾರದ ಪ್ರಶ್ನೆ ಬರಲು ಸಾಧ್ಯ? ಎಂದು ಪ್ರಶ್ನೆ ಮಾಡಿದೆ.

ಲಿವ್-ಇನ್ ಸಂಬಂಧ ಕಡಿತವಾದಾಗ ಮಹಿಳೆಯರು ಲೈಂಗಿಕ ದೌರ್ಜನ್ಯ ಎಂಬುದನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ನ್ಯಾಯಾಲಯ ವಿಷಾದಿಸಿದೆ. ದೀರ್ಘಕಾಲ ಸಹ ಜೀವನ ವಾಸದ ನಂತರ ಹೀಗೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸುವುದರ ಕಾನೂನುಬದ್ಧತೆಯನ್ನು ಪೀಠ ಪ್ರಶ್ನಿಸಿದೆ.

Related Articles

Back to top button
error: Content is protected !!