ಇತರೆ

ಸುಜ್ಞಾನ ಎಜುಕೇಶನಲ್ ಟ್ರಸ್ :ಮಂಥನ 2026 ಬೇಸುಗೆ ಶಿಬಿರ- ಕಂಬಳ ಗದ್ದೆಯಲ್ಲಿ ವಿಶಿಷ್ಟ ಕ್ರೀಡಾಕರ್ಷಣೆ 

Views: 0

ಕನ್ನಡ ಕರಾವಳಿ ಸುದ್ದಿ: ಕುಂದಾಪುರ  ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಸುಜ್ಞಾನ ಪಿ.ಯು. ಕಾಲೇಜು, ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದರ ಜಂಟಿ ಆಶ್ರಯದಲ್ಲಿ ನಡೆದ 2ನೇ ದಿನದ ‘ಮಂಥನ 2026’ ಬೇಸಿಗ ಶಿಬಿರ ವಿಶಿಷ್ಟ ಆಕರ್ಷಣೆಗಳೊಂದಿಗೆ ಚಾಲನೆ ನೀಡಲಾಯಿತು.

ಎರಡನೇ ದಿನದ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಬಾರಕೂರು ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ ಉದ್ಘಾಟಿಸಿ, ಮಾತನಾಡಿ ಕೆಸರುಗದ್ದೆ ಓಟ ಎಲ್ಲರಿಗೂ ಸಿಗುವುದಿಲ್ಲ ಮಕ್ಕಳಿಗೆ ನಮ್ಮ ಮಣ್ಣಿನ ಪರಿಚಯಮಾಡುವ ದೃಷ್ಟಿಯಿಂದ ಕೆಸರು ಗದ್ದೆಯ ಓಟ ಸಹಿತ ಅನೇಕ ಆಟಗಳ ಜತೆಗೆ ನಮ್ಮ ಜನಪದ ಕಲೆ, ತುಳುನಾಡಿನ  ಕ್ರೀಡೆ ಕಂಬಳ ಪ್ರದರ್ಶನ ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದರು.

ಉದ್ಯಮಿ ಸತೀಶ್ ಕೆದಿಲಾಯ ಮಾತನಾಡಿ, ಪ್ರಸ್ತುತ ನಾವು ಹಣದ ಬೆನ್ನೇರಿ ಓಡುತ್ತಿದ್ದೇವೆ ಹೊರತು ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಬಗ್ಗೆ ಮರೆತು ಬಿಟ್ಟಿದ್ದೇವೆ. ಅಂತಹ ಕೆಲವೊಂದು ಜೀವನ ಮೌಲ್ಯವನ್ನು ಸುಜ್ಞಾನ ವಿದ್ಯಾ ಸಂಸ್ಥೆ ಹೇಳಿ ಕೊಡುತ್ತಿದೆ ಎನ್ನುವ ಹೆಮ್ಮೆ ನಮಗಿದೆ ಎಂದು ಶ್ಲಾಘಿಸಿದರು.

ಕೃಷಿಭೂಮಿಯಲ್ಲಿ ಸಾಂಕೇತಿಕವಾಗಿ ಕಂಬಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೋಣಗಳ ಓಟದ ಹಿನ್ನೆಲೆಯಲ್ಲಿ ತೇಲಿ ಬಂದ ಚೆಂಡೆ ಹಾಗೂ ಕೊಳಲು ವಾದನದ ಧ್ವನಿಗೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಸಂಭ್ರಮಿಸಿದರು. ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಕೆಸರು ಗದ್ದೆಯ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಸಲಾಗಿತ್ತು.

ಸುಮಂತ್ ಗೌಡ ಮಾತನಾಡಿ, ಕರಾವಳಿಯ ಮಂದಿಗೆ ಕಂಬಳ, ಇಲ್ಲಿನ ಆಚರಣೆಗಳು ತಿಳಿದಿರುತ್ತವೆ. ರಾಜ್ಯದ ಬೇರೆ ಕಡೆಗಳಿಂದ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ. ಇಲ್ಲಿನ ಕಲಾ ಸಂಸ್ಕೃತಿಯನ್ನು ಪರಿಚಯಿಸುವುದು ನಿಜಕ್ಕೂ ಸಂತಸ ತರುತ್ತಿದೆ ಎಂದರು.

 ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಮಾತನಾಡಿ, ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಯನ್ನು ಹೊರ ತರಲು ನಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುವ ಕಂಬಳದ ಮೂಲಕ ಕೋಣಗಳನ್ನು ಓಡಿಸುವ ಪ್ರಾತ್ಯಕ್ಷಿಕೆ ಮತ್ತು ಕೆಸರುಗದ್ದೆ ಓಟ ಶಿಬಿರಕ್ಕೆ ಮೆರಗು ತಂದಿದೆ ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ರಾಜ್ಯಾದ್ಯಂತ ಗುಣಮಟ್ಟದ ಶಿಕ್ಷಣ ನೀಡಲು ಹೆಸರುವಾಸಿಯಾಗಿರುವ ಸುಜ್ಞಾನ ವಿದ್ಯಾ ಸಂಸ್ಥೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ದೇಶದ ಪರಂಪರೆ ಸಂಸ್ಕೃತಿ, ಕಲೆಯ ಅರಿವನ್ನು ಮೂಡಿಸುವ ಉದ್ದೇಶದಿಂದ  ತುಳುನಾಡಿನ ಶ್ರೇಷ್ಠ ಕಲೆಯಾದ ಕಂಬಳದ ಪ್ರಾತ್ಯಕ್ಷಿಕೆಯಲ್ಲಿ ಈ ಶಿಬಿರವು ವಿನೂತನ ಪ್ರಯೋಗಕ್ಕೆ ಕಾಲಿಟ್ಟಿದೆ. ಇನ್ನಿತರ ಹಲವಾರು ಚಟುವಟಿಕೆಗಳನ್ನು ಮಂಥನದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದೇವೆ ಎಂದರು 

ಸಂಪನ್ಮೂಲ ವ್ಯಕ್ತಿಗಳಾದ ವಂದನಾ ರೈ ಕಾರ್ಕಳ, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಖಜಾಂಚಿ ಭರತ್ ಶೆಟ್ಟಿ ಮುಖ್ಯೋಪಾಧ್ಯಾಯ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿ, ಹರೀಶ್ ಶೆಟ್ಟಿ , ಶಿಕ್ಷಕ ರಜತ್ ಭಟ್ ನಿರೂಪಿಸಿ, ವಂದಿಸಿದರು.

Related Articles

Back to top button
error: Content is protected !!