ಕರಾವಳಿ

ಕಾಂತಾರ ದೈವಕ್ಕೆ ಅಪಮಾನ: ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತೇನೆ ಎಂದ ಬಾಲಿವುಡ್ ನಟ

Views: 75

ಕನ್ನಡ ಕರಾವಳಿ ಸುದ್ದಿ: ಕಾಂತಾರ ಬಗೆಗಿನ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿತ್ತು.

ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ ಕ್ಷಮಾಪಣೆ ಪತ್ರ ಸಲ್ಲಿಸಲಾಗುವುದು ಮತ್ತು ಚಾಮುಂಡಿ ಬೆಟ್ಟಕ್ಕೂ ಭೇಟಿ ಕೊಡಲಾಗುವುದು ಎಂದು ಬಾಲಿವುಡ್ ನಟ ರಣಬೀರ್‌ಸಿಂಗ್ ಹೇಳಿದ್ದಾರೆ.

ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಮತ್ತು ನಟನನ್ನ ಹೊಗಳುವ ಬರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನಿಡೀದ್ರು. ಈ ವೇಳೆ ಕಾಂತಾರ ನಟ ರಿಷಬ್ ಕೂಡ ಹಾಗೆ ಹೇಳಬಾರದು ಎಂದು ವಿನಯದಿಂದಲೇ ವಿರೋಧ ಮಾಡಿದ್ರು.‌ ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಕೇಸ್ ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದ ರಣವೀರ್ ಸಿಂಗ್ ಅರ್ಜಿ ವಿಚಾರಣೆ ನಡೆಯಿತು.

ಎಫ್‌ಐಆರ್ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಅರ್ಜಿ ವಿಚಾರಣೆ ಇಂದು ನಡೆದಿದ್ದು, ಈ ಸಮಯದಲ್ಲಿ ತಮ್ಮ ಹೇಳಿಕೆಗೆ ಕ್ಷಮೆ ಕೋರಿ ರಣವೀರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಹಾಗೂ ಕೋರ್ಟ್ ಗೂ ಕ್ಷಮಾಪಣೆ ಪ್ರಮಾಣಪತ್ರ ಸಲ್ಲಿಸುತ್ತಾರೆ. ಅಷ್ಟೇ ಅಲ್ಲದೆ , ಚಾಮುಂಡಿ ದೇವಾಲಯಕ್ಕೂ ಭೇಟಿ ನೀಡುತ್ತೇವೆ‌ ಎಂದು ರಣವೀರ್ ಸಿಂಗ್ ಪರ ವಕೀಲರ ಹೇಳಿಕೆ ನೀಡಿದ್ದಾರೆ

ಈ ಸಮಯದಲ್ಲಿ ದೂರುದಾರ ಪ್ರಶಾಂತ್ ಮೆತಾಲ್ ವಾದ ನಡೆಸಿ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡುವುದು ಮಾತ್ರವಲ್ಲ , ಅಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.

 

 

Related Articles

Back to top button
error: Content is protected !!