ಸ್ನೇಹಿತರೊಂದಿಗೆ ಪಾರ್ಟಿಗೆ ಹೋದ ಯುವತಿ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆ, ಹಲವು ಅನುಮಾನ
Views: 78
ಕನ್ನಡ ಕರಾವಳಿ ಸುದ್ದಿ: ವಿಶಾಖಪಟ್ಟಣದ ಸಾಗರ್ ನಗರದಲ್ಲಿ ನಡೆದ ಯುವತಿ ಶಾಂತಿಕುಮಾರಿ ಎಂಬುವವರ ಸಾವು ಈಗ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಸ್ನೇಹಿತರೊಂದಿಗೆ ಪಾರ್ಟಿಗೆ ಹೋದ ಯುವತಿ, ಮರುದಿನ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪಾರ್ಟಿಯಿಂದ ಲಾಡ್ಜ್ ವರೆಗೆ ನಡೆದ ಆ ಕೆಲವು ಗಂಟೆಗಳಲ್ಲಿ ಏನಾಯಿತು? ಆಕೆ ಯಾರೊಂದಿಗೆ ಹೋಗಿದ್ದಳು? ಈ ಸಾವು ಕೊಲೆಯೋ ಅಥವಾ ಆತ್ಮತ್ಯೆಯೋ? ಎಂಬಕೂತೂಹಲಕಾರಿಅಂಶಗಳುಸದ್ಯಪೊಲೀಸರನ್ನುಕಾಡುತ್ತಿ ರುವ ಪ್ರಶ್ನೆಯಾಗಿವೆ.
ಶಾಂತಿಕುಮಾರಿ ತನ್ನ ಸ್ನೇಹಿತರೊಂದಿಗೆ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಆ ಪಾರ್ಟಿ ಎಲ್ಲಿ ನಡೆಯಿತು? ಅಲ್ಲಿಂದ ಆಕೆ ಲಾಡ್ಜ್‌ಗೆ ಹೋಗಿದ್ದು ಹೇಗೆ? ಎನ್ನುವುದರ ಬಗ್ಗೆ ಪೊಲೀಸರಿಗೂಕೂಡ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಪಾರ್ಟಿ ಮುಗಿದ ಮೇಲೆ ಆಕೆ ಮನೆಗೆ ಹೋಗುವ ಬದಲು ಲಾಡ್ಜ್‌ಗೆ ಏಕೆ ಹೋದಳು ಎಂಬುದು ಈ ಪ್ರಕರಣದ ಬಹುದೊಡ್ಡ ಪ್ರಶ್ನೆಯಾಗಿದೆ.
ಅರಿಲೋವ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪಾರ್ಟಿ ನಡೆದ ಸ್ಥಳ ಮತ್ತು ಲಾಡ್ಜ್ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ ಆಕೆ ಕೊನೆಯದಾಗಿ ಯಾರೊಂದಿಗೆ ಮಾತನಾಡಿದ್ದಳು ಮತ್ತು ಪಾರ್ಟಿಯಲ್ಲಿದ್ದಾಗ ಯಾರ ಸಂಪರ್ಕದಲ್ಲಿದ್ದಳು ಎನ್ನುವಬಗ್ಗೆ ಕಾಲೇಟಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವುಅನುಮಾನಿತರನ್ನ ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೂರ್ವಯೋಜಿತ ಕೊಲೆ ಎಂದು ಆಕೆಯ ಕುಟುಂಬಸ್ಥರು ಮತ್ತು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಮಗಳನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ, ನಮಗೆ ನ್ಯಾಯ ಬೇಕು ಅಂತಾ ಒತ್ತಾಯಿಸುತ್ತಿದ್ದಾರೆ






