ಆರೋಗ್ಯ

ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞ ಕಿಡ್ನಾಪ್ 3 ಕೋಟಿಗೆ ಡಿಮ್ಯಾಂಡ್:ಅಪಹರಣಕಾರರ ಪತ್ತೆಗೆ ಬಲೆ!

Views: 158

ಕನ್ನಡ ಕರಾವಳಿ ಸುದ್ದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಣ ಮಾಡಿ 3ಕೋಟಿಗೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ನಗರದ ಸತ್ಯನಾರಾಯಣ ಪೇಟೆಯಲ್ಲಿನ ಶನೇಶ್ವರ ದೇವಸ್ಥಾನದ ಬಳಿ ವಾಕಿಂಗ್ ಮಾಡುವಾಗ ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಿದ್ದು, ಮೂರು ಕೋಟಿ ರೂಪಾಯಿಗಳಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.ಕಾರಿನಲ್ಲಿ ಬಂದಿದ್ದ ಅಪಹರಣಕಾರರು ವೈದ್ಯರನ್ನು ತಕ್ಷಣ ಬಾಯಿಮುಚ್ಚಿ ಕಾರಿನಲ್ಲಿ ಕೂಡಿಸಿಕೊಂಡು ತೆರಳಿದ್ದಾರೆ. ಇವರ ಸಹೋದರ ವೇಣು ಅವರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.ಕಿಡ್ನಾಪರ್ಸ್ ಪತ್ತೆಗಾಗಿ ಬಳ್ಳಾರಿ ಎಸ್ಪಿ ಡಾ.ಶೊಭರಾಣಿ ವಿಜೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

Related Articles

Back to top button