ಇತರೆ

ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ: ಇರಾನ್ ನ 48 ಜನ ಉನ್ನತ ನಾಯಕರ ಹತ್ಯೆ, ಡೋನಾಲ್ಡ್  ಟ್ರಂಪ್ ಘೋಷಣೆ

Views: 43

ಕನ್ನಡ ಕರಾವಳಿ ಸುದ್ದಿ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ 48 ಉನ್ನತ ನಾಯಕರನ್ನು ಮಟ್ಟಹಾಕಲಾಗಿದೆ ಎಂದು ಡೋನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ.

ಇರಾನ್ ನಾದ್ಯಂತ 40 ದಿನಗಳ ಶೋಕಾಚರಣೆಗೆ ಆದೇಶ ಹೊರಡಿಸಿದೆ. ಇರಾನ್ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೇ ಏಟಿಗೆ ಇರಾನ್‌ನ 48 ಉನ್ನತ ನಾಯಕರನ್ನು ಮಟ್ಟಹಾಕಲಾಗಿದೆ ಎಂದು ಅವರು ಘೋಷಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್‌ ನಾವು ನಡೆಸಿದ ದಾಳಿಯಲ್ಲಿ ಇರಾನ್ ಆಡಳಿತದ 48 ಪ್ರಮುಖ ನಾಯಕರು ಈಗ ಇಲ್ಲ. ಈ ಕಾರ್ಯಾಚರಣೆಯು ನಿಗದಿತ ವೇಳಾಪಟ್ಟಿಗಿಂತಲೂ ಮುಂಚಿತವಾಗಿಯೇ ಗುರಿ ತಲುಪಿದೆ” ಎಂದು ಅವರು ಗುಡುಗಿದ್ದಾರೆ.

ಟ್ರಂಪ್ ಹೇಳಿಕೆಯು ಇಡೀ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಆದರೆ, ಇರಾನ್ ಈವರೆಗೂ ಈ ಸಾವು-ನೋವುಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

Related Articles

Back to top button
error: Content is protected !!