ಆರೋಗ್ಯ

ಡಾ| ಜಿ.ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಫೆ. 7ರ ವರೆಗೆ ನೋಂದಣಿ ವಿಸ್ತರಣೆ

Views: 49

ಕನ್ನಡ ಕರಾವಳಿ ಸುದ್ದಿ:  ಡಾ| ಜಿ. ಶಂಕರ್ ಅವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮೊಗವೀರ ಯುವ ಸಂಘಟನೆಯ ಸಹಯೋಗದೊಂದಿಗೆ ಮಾಹೆಯ ಡಾ| ರಾಮ್‌ ದಾಸ್ ಪೈ, ಡಾ| ರಂಜನ್ ಪೈ, ಡಾ| ಎಚ್.ಎಸ್. ಬಲ್ಲಾಳ್ ಅವರ ಸಹಕಾರದಲ್ಲಿ ಆಯೋಜಿಸಿದ ಜಿ. ಶಂಕರ್ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯ ನೋಂದಣಿಯನ್ನು ಫೆ. 7ರ ವರೆಗೆ ವಿಸ್ತರಿಸಲಾಗಿದೆ.

ಈ ಕಾರ್ಡ್‌ ಸೌಲಭ್ಯ 1 ವರ್ಷಕ್ಕೆ ಸೀಮಿತವಾಗಿದ್ದು, ಫೆ. 7ರ ವರೆಗೆ ನೋಂದಾಯಿಸಿಕೊಂಡ ಎಲ್ಲ ಫಲಾನುಭವಿಗಳು ಫೆ. 15ರಿಂದ ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ರಿಯಾಯಿತಿ ಸೌಲಭ್ಯ ಪಡೆಯಬಹುದಾಗಿದೆ. ಇದು ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದ್ದು ನೋಂದಾವಣಿಗೆ ಒಳಪಡುವ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಮತ್ತು ಕುಟುಂಬದ ರೇಷನ್ ಕಾರ್ಡ್ ಪ್ರತಿಯೊಂದಿಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕೇಂದ್ರ ಕಚೇರಿ ಅಥವಾ ಸಂಘಟನೆಯ ವಿವಿಧ ಘಟಕಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮೊಗವೀರ ಯುವ ಸಂಘಟನೆಯ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!