ಯುವಜನ
ಕಾರ್ಕಳ: ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು
Views: 108
ಕನ್ನಡ ಕರಾವಳಿ ಸುದ್ದಿ: ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಫೆ. 28ರಂದು ಕಾರ್ಕಳ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದಲ್ಲಿ ಸಂಭವಿಸಿದೆ.
ಉಡುಪಿಯಿಂದ ಕಾರ್ಕಳದ ಕಡೆಗೆ ವೇಗವಾಗಿ ಬರುತ್ತಿದ್ದ ಇಕೋ ಕಾರು ಮತ್ತು ಕಾರ್ಕಳದಿಂದ ಬೈಲೂರಿನತ್ತ ಸಾಗುತ್ತಿದ್ದ ಬೈಕ್ ನಡುವೆ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲಾ ಮುಂಭಾಗ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಬೈಕ್ ಸವಾರರಾದ ಎರ್ಲಪಾಡಿ ಗೋವಿಂದೂರಿನ ಶಿವಾನಂದ (19) ಮತ್ತವರ ಸಂಬಂಧಿ ರಕ್ಷಿತ್ (18) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು ಸಹಸವಾರ ಚರಂಡಿಗೆಸೆಯಲ್ಪಟ್ಟಿದ್ದರು ಎಂದು ಅಪಘಾತದ ತೀವ್ರತೆ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.






