ಸಾಂಸ್ಕೃತಿಕ

ಕೋಟ: ಪೆರ್ಡೂರು ಮೇಳದ ಯಕ್ಷ ವೇದಿಕೆಯಲ್ಲಿ ಶ್ರೀಪಾದ್ ಭಟ್ ಥಂಡಿಮನೆ, ರವೀಂದ್ರ ದೇವಾಡಿಗರಿಗೆ ಸನ್ಮಾನ

Views: 108

ಕೋಟ: ಹಿರೇ ಮಹಾಲಿಂಗೇಶ್ವರ ಜಾತ್ರೆಯ  ಪ್ರಯುಕ್ತ  ಕೋಟ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಹಮ್ಮಿಕೊಂಡ ಸಾಂಸ್ಕೃತಿಕ ವೈಭವದ ಅಂಗವಾಗಿ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ವತಿಯಿಂದ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಹಿರಿಯ ಕಲಾವಿದ ಶ್ರೀಪಾದ್ ಹೆಗಡೆ ಥಂಡಿಮನೆ, ಹಾಸ್ಯಕಲಾವಿದ ರವೀಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಮಿತ್ರವೃಂದದ ಅಧ್ಯಕ್ಷ ರಾಜು ದೇವಾಡಿಗ ಬೆಂಗಳೂರು ವಿದ್ವಾನ್ ವಿಜಯ್ ಮಂಜರ್ ಪಾಂಡೇಶ್ವರ,ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಜಿ.ಎಸ್ ಪಾಂಡು ಪೂಜಾರಿ,ಹೋಟೆಲ್ ಉದ್ಯಮಿ ಕೆ.ವೆಂಕಟೇಶ ಪ್ರಭು,ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಗಣೇಶ್ ಭಟ್ಟ,ಪೆರ್ಡೂರು ಮೇಳದ ಯಜಮಾನ ವೈ ಕರುಣಾಕರ ಶೆಟ್ಟಿ,ಮಿತ್ರವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ,ಉದ್ಯಮಿ ಚಂದ್ರ ದೇವಾಡಿಗ ಬೆಂಗಳೂರು,ಮಿತ್ರವೃಂದದ ಕೋಶಾಧಿಕಾರಿ ಚಂದ್ರ ದೇವಾಡಿಗ,ಪಂಚಾಯತ್ ಸದಸ್ಯ ಅಜಿತ್ ದೇವಾಡಿಗ, ಮಿತ್ರವೃಂದದ ಶಂಕರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರ ಆಚಾರ್ ಕೋಟ ನಿರೂಪಿಸಿ ವಂದಿಸಿದರು.ನಂತರ ‘ಗಂಗೆ ತುಂಗೆ ಕಾವೇರಿ’ಎಂಬ ಕಥಾನಕ ಪ್ರದರ್ಶನಗೊಂಡಿತು.

 

Related Articles

Back to top button