ಸಾಂಸ್ಕೃತಿಕ

ಬಿಗ್‌ಬಾಸ್ ಶೋ ಮುಗಿದರೂ ಚೈತ್ರಾ ಕುಂದಾಪುರ- ಅಶ್ವಿನಿ ಗೌಡ ಮಧ್ಯೆ ಪೋಸ್ಟ್ ವಾರ್ !

Views: 66

ಕನ್ನಡ ಕರಾವಳಿ ಸುದ್ದಿ:  ಬಿಗ್‌ಬಾಸ್ ಆಟ ಮುಗಿದು ಎಷ್ಟೋ ದಿನಗಳಾದ್ರೂ, ಸ್ಪರ್ಧಿಗಳ ನಡುವಿನ ಮುನಿಸು ಮಾತ್ರ ಇನ್ನೂ ಮುಗಿದಿಲ್ಲ. ದೊಡ್ಮನೆಯೊಳಗೆ ನಡೆಯುತ್ತಿದ್ದ ಜಗಳ ಇದೀಗ ಸೋಶಿಯಲ್ ಮೀಡಿಯಾ ಅಂಗಳಕ್ಕೆ ಬಂದು ನಿಂತಿದೆ.ನಟಿ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಮರ ಜೋರಾಗಿದೆ.

ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಅಶ್ವಿನಿ ಗೌಡ, ತಮ್ಮ ಕೈ ಮೇಲಿರುವ ಗಾಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ‘ಇದು ಯಾವ ಪ್ರಾಣಿ ಪರಚಿರಬಹುದು? ಸರಿಯಾದ ಉತ್ತರ ಹಾಗೂ ಉತ್ತಮ ಶೀರ್ಷಿಕೆ ನೀಡಿದವರಿಗೆ ಸೂಕ್ತ ಬಹುಮಾನವಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆಯೂ ಮಾತನಾಡಿ, “ಚೈತ್ರಾ ಕುಂದಾಪುರ ನನಗೆ ಟಾಸ್ಕ್ ವೇಳೆ ಉಗುರಿನಿಂದ ಪರಚಿದ್ದರು ಎಂದು ಆರೋಪಿಸಿದ್ದಾರೆ.

ಅಶ್ವಿನಿ ಅವರ ಈ ಪೋಸ್ಟ್ ಮತ್ತು ಆರೋಪಕ್ಕೆ ಫೈರ್‌ಬ್ರ್ಯಾಂಡ್ ಚೈತ್ರಾ ಕುಂದಾಪುರ ಖಾರವಾಗಿಯೇ ಉತ್ತರಿಸಿದ್ದಾರೆ. ಅಶ್ವಿನಿಗೆ ಟಾಂಗ್ ನೀಡಿರುವ ಚೈತ್ರಾ, ‘ಕ್ಷಮಿಸಿ, ಇದನ್ನೆಲ್ಲಾ ಪ್ರಚಾರ ಮಾಡಲು ಮತ್ತು ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿ.ಆರ್ ಟೀಮ್ ಇರಲಿಲ್ಲ’ ಎಂದು ಚುಚ್ಚಿದ್ದಾರೆ.

ಘಟನೆಯ ಬಗ್ಗೆ ವಿವರಿಸಿರುವ ಚೈತ್ರಾ, ‘ಆಟದ ವೇಳೆ ನನಗಿಂತ ಹೆಚ್ಚು ತೂಕವಿರುವ ವ್ಯಕ್ತಿ ನನ್ನ ಹೊಟ್ಟೆಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ನಾನು ಪೀರಿಯಡ್ಸ್ ಕೂಡ ಆಗಿದ್ದೆ. ಆದರೂ ಆಟ ಆಡಿದೆ. ನನ್ನ ಕತ್ತನ್ನು ಟ್ವಿಸ್ಟ್ ಮಾಡಲಾಗಿತ್ತು. ಟಿಂಚರ್ ಹಾಕಿದರೂ ನೋವು ಕಡಿಮೆ ಆಗಿರಲಿಲ್ಲ. ನನ್ನ ದೇಹದ ಮೇಲೂ ಕೂಡ ಉಗುರಿನ ಗುರುತುಗಳಿವೆ. ನನಗೂ ನೋವಾಗಿದೆ. ಆದರೆ ನನಗೆ ಆಟವನ್ನು ಆಟವಾಗಿಯೇ ನೋಡುವ ಮನಸ್ಥಿತಿ ಇದೆ’ ಎಂದು ತಿರುಗೇಟು ನೀಡಿದ್ದಾರೆ.

 

Related Articles

Back to top button
error: Content is protected !!