25 ಮದುವೆ ಮುಚ್ಚಿಟ್ಟು ಶಾಸಕನ ಪುತ್ರಿಯೊಂದಿಗೆ ವಿವಾಹ! ಮೋಸ ಹೋದ ಬಿಜೆಪಿ ಶಾಸಕ, ಪುತ್ರಿ ಕಣ್ಣೀರು
Views: 48
ಕನ್ನಡ ಕರಾವಳಿ ಸುದ್ದಿ: ಈಗಾಗಲೇ 25 ಮದುವೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪುತ್ರಿಯನ್ನು ಮದುವೆ ಮಾಡಿಕೊಂಡು ಆಕೆಗೆ ಮೋಸ ಮಾಡಿರುವುದಾಗಿ ಉತ್ತರ ಪ್ರದೇಶದ ಸೆವಾಟ ಕ್ಷೇತ್ರದ ಶಾಸಕ ಗ್ಯಾನ್ ತಿವಾರಿ, ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಇಲೆ ಅನುಜ್ ತ್ರಿವೇದಿ ಹಾಗೂ ಆತನ ಪುತ್ರ ಅಹ ಪ್ರಖರ್ ತ್ರಿವೇದಿ ಎಂಬಿಬ್ಬರನ್ನು ಬಂಧಿಸಲಾಗಿದೆ.

2024ರಲ್ಲಿ ಶಾಸಕ ಜ್ಞಾನ ತಿವಾರಿ ಯವರ ಪುತ್ರಿ ಪ್ರಜ್ಞಾ ತಿವಾರಿ, ಪ್ರಖರ್ ತ್ರಿವೇದಿಯವರನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಹುಡುಗನ ಬಗ್ಗೆ ವಿಚಾರಿಸಿದ್ದಾಗ, ಆತ ಉತ್ತರ ಪ್ರದೇಶದ ಚಂದ್ರವಾಲ್ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಎಂದು ತಿಳಿದುಬಂದಿತ್ತು. ಅದನ್ನು ನಂಬಿ ಶಾಸಕರು ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಆದರೆ, ಅದಾಗಿ ಎರಡೂವರೆ ವರ್ಷಗಳ ಅನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖರ್‌ತಿವಾರಿ, ಅನ್ಯ ಮಹಿಳೆಯರು-ಮಕ್ಕಳೊಂದಿಗೆ ಇರುವ ಫೋಟೋಗಳು ಬಹಿರಂಗವಾಗಿದ್ದವು. ಆಗ ಪರಿಶೀಲಿಸಿದಾಗ ಪ್ರಖರ್, ನಾನಾ ರಾಜ್ಯಗಳ 25 ಮಹಿಳೆಯರನ್ನು ಬೇರೆ ಹೆಸರುಗಳಲ್ಲಿ ಮದುವೆಯಾಗಿ, ಅವರಿಂದ ಕೋಟ್ಯಾಂತರ ಹಣ ಕಬಳಿಸಿರುವುದು ಬೆಳಕಿಗೆ ಬಂದಿದೆ. ಮೋಸಕ್ಕೆ ಒಳಗಾದ ಶಾಸಕ ಮತ್ತು ಪುತ್ರಿ ಕಣ್ಣೀರು ಹಾಕಿದ್ದಾರೆ.






